Saturday, June 6, 2026
spot_imgspot_img
spot_imgspot_img

ಪುಂಜಾಲಕಟ್ಟೆ: ಬೈಕ್’ಗಳ ನಡುವೆ ಅಪಘಾತ; ವಿದ್ಯಾರ್ಥಿ ಸಾವು

- Advertisement -
- Advertisement -
astr

ಬೆಳ್ತಂಗಡಿ: ಬೈಕ್ -ಬೈಕ್ ನಡುವೆ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರು ವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ವಿದ್ಯಾರ್ಥಿ ಶಫೀಕ್ ಸಾವನ್ನಪ್ಪಿದ್ದಾರೆ. ಶಫೀಕ್ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎರಡನೇ ವರ್ಷದ ಡಿಗ್ರಿ ವಿದ್ಯಾರ್ಥಿ. ಶಫೀಕ್ ಕರಾಯದಿಂದ ಮಂಗಳೂರಿಗೆ ಹಿಮಾಲಯನ್ ಬೈಕ್ ನಲ್ಲಿ ಹೋಗುವಾಗ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ.

ಇನ್ನೊಂದು ಬೈಕ್ ನಲ್ಲಿದ್ದವರು ಮಂಡತ್ಯಾರಿನ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವವರು ಎನ್ನಲಾಗಿದೆ. ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!