Friday, May 3, 2024
spot_imgspot_img
spot_imgspot_img

ಪುತ್ತೂರು ಕ್ಷೇತ್ರದಲ್ಲಿ ಚುನಾವಣಾ ಟಿಕೆಟ್ ಆಕಾಂಕ್ಷಿಗಳ ಟಫ್ ಫೈಟ್..! ಪುತ್ತೂರಿನಲ್ಲಿ ಕೇಳಿ ಬರ್‍ತಿದೆ ಪುತ್ತಿಲ ಹೆಸರು.?

- Advertisement -G L Acharya panikkar
- Advertisement -

ಪುತ್ತೂರಿನಲ್ಲಿ ಕೇಳಿ ಬರ್‍ತಿದೆ ಪುತ್ತಿಲ ಹೆಸರು.. ಕಮಲ ಪಡೆಯ ಟಿಕೆಟ್ ಯಾರಿಗೆ ಸಿಗಬಹುದು?

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ತಯಾರಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ನಿಧಾನವಾಗಿ ಎಲ್ಲಾ ತಯಾರಿ ಆರಂಭಿಸಿದ್ದಾರೆ. ಮತದಾರರನ್ನು ಒಲಿಸುವ ತಂತ್ರ ಒಂದೆಡೆಯಾದರೆ ಟಿಕೆಟ್ ಯಾರಿಗೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಹೀಗಿರುವಾಗ ದಕ್ಷಿಣ ಕನ್ನಡ ಕ್ಷೇತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಹೇಗಿದೆ ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಯಾರು? ಎಂಬುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಚುನಾವಣಾ ರಣ ಕಹಳೆ ಕೇಳಿಬರುತ್ತಿದ್ದು ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಈ ಪೈಕಿ ಸಾಮಾಜಿಕ ಸೇವಾ ಕಾರ್ಯದಲ್ಲಿ ಗುರುತಿಸಿಕೊಂಡವರು ಒಂದೆಡೆಯಾದರೆ, ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡಿ ಹೆಸರುವಾಸಿಯಾದವರು ಇನ್ನೊಂದು ಕಡೆ..

ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲರವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದ್ದು, “ಪುತ್ತೂರಿಗೆ ಪುತ್ತಿಲ” ಎಂಬ ಪೋಸ್ಟರ್‌ ವೈರಲ್‌ ಆಗುತ್ತಿದೆ. ಈ ಹಿಂದೆ 2018 ರಲ್ಲಿ ನ್ಯಾಯಯುತವಾಗಿ ಟಿಕೆಟ್ ಸಿಗಬೇಕಾಗಿತ್ತು. ಕೊನೆಯ ಹಂತದವರೆಗೂ ಇವರ ಹೆಸರು ಎಲ್ಲೆಡೆ ಕೇಳಿ ಬಂದಿದ್ದು ಆದರೆ ಆ ಬಾರಿ ಟಿಕೆಟ್ ಸಂಜೀವ ಮಠಂದೂರುರವರ ಪಾಲಾಗಿತ್ತು. ಅರುಣ್ ಕುಮಾರ್ ಪುತ್ತಿಲ ಅಂದಿನಿಂದ ಇಂದಿನವರೆಗೆ ಹಿಂದೂ ಸಂಘಟನೆಯ ಧ್ವಜ ಹಿಡಿದುಕೊಂಡು ಸಂಘಟನೆಯ ಪರವಾಗಿ ಸಮಾಜ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಿಂದೂ ಮುಖಂಡ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಯಾರ ಪಾಲಾಗುತ್ತೆ ಎಂದು ಕಾದು ನೋಡಬೇಕಾಗಿದೆ.

- Advertisement -

Related news

error: Content is protected !!