Friday, June 26, 2026
spot_imgspot_img
spot_imgspot_img

ಪುತ್ತೂರು: ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ಆರೋಪ; ದೂರು ದಾಖಲು

- Advertisement -
- Advertisement -

ಪುತ್ತೂರು: ಒಂದೂವರೆ ತಿಂಗಳ ಶಿಶುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ್ದಾರೆ ಎಂದು ಪುತ್ತೂರಿನ ಆಸ್ಪತ್ರೆಯೊಂದರ ವೈದ್ಯರ ವಿರುದ್ಧ ಮಗುವಿನ ತಂದೆ ನಗರ ಠಾಣೆಗೆ ಮಂಗಳವಾರ ದೂರು ನೀಡಿದ ಘಟನೆ ನಡೆದಿದೆ.

ಬಂಟ್ವಾಳದ ಕನ್ಯಾನ ನಿವಾಸಿ ಜೀವನ್‌ ಪ್ರಕಾಶ್‌ ಡಿ’ಸೋಜಾ ಅವರು ದೂರು ನೀಡಿದ ವ್ಯಕ್ತಿ. ಇವರು ಅ. 24ರಂದು ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚುಚ್ಚು ಮದ್ದು ಕೊಡಿಸಿದ್ದರು. ಆದರೆ ಚುಚ್ಚು ಮದ್ದಿನಲ್ಲಿ ಸ್ಟಿಕ್ಕರ್‌ ಅಂಟಿಸಲಾಗಿದ್ದು, ಅವಧಿ ಮೀರಿದ ದಿನಾಂಕ ಕಂಡುಬಂದಿದೆ.

ಹಾಗಾಗಿ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ ಪೊಲೀಸರು ವೈದ್ಯರನ್ನು ಠಾಣೆಗೆ ಕರೆಯಿಸಿ ವಿಚಾರಿಸಿರುವ ಮಾಹಿತಿ ತಿಳಿದುಬಂದಿದೆ.

- Advertisement -

Related news

error: Content is protected !!