Saturday, June 6, 2026
spot_imgspot_img
spot_imgspot_img

ಪುತ್ತೂರು: ಮಹಿಳೆ ಮೇಲೆ ಹಲ್ಲೆ ಆರೋಪ; ನಿವೃತ್ತ ಸೇನಾ ಸಿಬ್ಬಂದಿಯ ಬಂಧನ

- Advertisement -
- Advertisement -

ಪುತ್ತೂರು: ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಿವೃತ್ತ ಸೇನಾ ಸಿಬ್ಬಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಯಕುಮಾರ್‌ ಪೂಜಾರಿ ಎಂದು ಗುರುತಿಸಲಾಗಿದೆ. ಪೊಲಿಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆಶಾ ರವರು ನೀಡಿದ ದೂರಿನಲ್ಲಿ, ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಶಬರಿಗಿರಿ ಮನೆ ನಿವಾಸಿ ಶಶಿಕುಮಾರ್‌ ಪಿಳ್ಳೆ ಅವರ ಪತ್ನಿ ಆಶಾ ಎಂಬವರಿಗೆ ಎಪ್ರಿಲ್‌‌ 15 ರಂದು ಆರೋಪಿ ಕಲ್ಲೆಸೆದು ಕಣ್ಣಿಗೆ ಗಾಯ ಮಾಡಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ್ದು, ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!