Monday, May 6, 2024
spot_imgspot_img
spot_imgspot_img

ಪುತ್ತೂರು: ಹಿಂದುತ್ವದ ಭದ್ರಕೋಟೆಯಲ್ಲಿ ಹೆಚ್ಚಾಯ್ತ ಜಾತಿ ರಾಜಕೀಯ..? ಕಾರ್ಯಕರ್ತರ ಭಾವನೆಗೆ ಬೆಲೆಯಿಲ್ಲ..! ಮುಂದೇನು ನಿರ್ಧಾರ..? ಬಿಜೆಪಿ ಕಾರ್ಯಕರ್ತರ ಆಕ್ರೋಶ

- Advertisement -G L Acharya panikkar
- Advertisement -

ಹಿಂದುತ್ವದ ಭದ್ರಕೋಟೆಯಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಸೋಲಿನ ಕಹಿ ಅನುಭವಿಸುತ್ತದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಬಿಜೆಪಿ ಹೈಕಮಾಂಡ್ ಒಂದರ ಮೇಲೋಂದರಂತೆ ಚರ್ಚೆ ನಡೆಸುತ್ತಿದ್ದು ಕರುನಾಡಿನಲ್ಲಿ ಕೇಸರಿ ಟಿಕೆಟ್ ಆಕಾಂಕ್ಷಿಗಳ ನಡುವೆಯೇ ಸಮರ ಏರ್ಪಟ್ಟಿದೆ. ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿಸಿ ಅಧಿಕಾರದ ಕುರ್ಚಿಯನ್ನು ಗಿಟ್ಟಿಸಿಕೊಂಡಿರುವ ಕಮಲ ಪಡೆ ಈ ಬಾರಿ ಜಾತಿ ರಾಜಕೀಯದ ಗುಂಗಲ್ಲಿ ನೆಲಕಚ್ಚುತ್ತೆ ಅನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಜಾತಿ ರಾಜಕೀಯ..! ಕಾರ್ಯಕರ್ತರ ಭಾವನೆಗೆ ಕಿಚ್ಚಿತ್ತೂ ಬೆಲೆಯಿಲ್ಲವೇ?
ಜಾತಿ ಆಧಾರದಲ್ಲಿ ಮಣೆ ಹಾಕಲು ಹೊರಟಿರುವ ಕಮಲ ಪಡೆಗೆ ಈ ನಿರ್ಣಯ ಮುಳ್ಳಿನ ಹಾಸಿಗೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಹಿಂದುತ್ವದ ಆಧಾರದಲ್ಲಿ ಮಣೆ ಹಾಕಿದ್ರೆ ಪುತ್ತೂರಿನಲ್ಲಿ ಜಾತಿ ಲೆಕ್ಕಾಚಾರ ಹಾಕುತ್ತಿದೆ ಬಿಜೆಪಿ ಹೈಕಮಾಂಡ್. ಈಗಾಗಲೇ ಹೈಕಮಾಂಡ್ ಟೀಮ್‌ಗೆ ಒಂದೇ ಜಾತಿಯ ಹಲವು ನಾಯಕರ ನಾಮ ನಿರ್ದೇಶನವಾಗಿದ್ದು, ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ದೊಡ್ಡ ಟೆನ್ಷನ್.

ಗೌಡ ಸಮುದಾಯ ಅಭ್ಯರ್ಥಿಗೆ ಮಣೆ ಹಾಕುತ್ತಾ ಬಿಜೆಪಿ..? ಕಾರ್ಯಕರ್ತರ ಆಕ್ರೋಶ
ಕೇಸರಿ ಕಾರ್ಯಕರ್ತರು ಹಿಂದುತ್ವದ ಆಧಾರದಲ್ಲಿ ಈ ಬಾರಿ ಅಭ್ಯರ್ಥಿಯನ್ನು ಘೋಷಿಸಬೇಕು ಎನ್ನುವ ಛಲದಲ್ಲಿದ್ದಾರೆ. ಆದರೆ ಇದಕ್ಕೆಲ್ಲಾ ಕಿವಿಗೊಡುತ್ತಿಲ್ಲಾ ಅನ್ನುವ ಆರೋಪ ಕಾರ್ಯಕರ್ತರದ್ದು. ಇನ್ನು ಸಂಸದ ನಳೀನ್ ಕುಮಾರ್‍ ಕಟೀಲ್ ಹಿಂದುತ್ವದ ಆಧಾರದಲ್ಲಿಯೇ, ಸಂಘ ಪರಿವಾರದ ಸಹಾಯದಿಂದಲೇ ಸ್ಥಾನ ಅಲಂಕರಿಸಿಕೊಂಡವರು. ಒಂದು ಕಾಲದಲ್ಲಿ ಹಿಂದುತ್ವದ ಅಜೆಂಡಾವನ್ನು ತನ್ನದಾಗಿಸಿಕೊಂಡು ಈಗ ಕಾರ್ಯಕರ್ತರ ಶ್ರಮ, ಸಂಘ ಪರಿವಾರದ ನಿರ್ಣಯಗಳನ್ನು ಗಾಳಿಗೆ ತೂರಿ, ಅಧಿಕಾರದ ಮದದಲ್ಲಿ ಜಾತಿ ರಾಜಕೀಯದ ಒಲವು ಹೆಚ್ಚಾಗುತ್ತಿದೆ. ಪುತ್ತೂರು ಬಿಜೆಪಿ ಪಾಳಯದಲ್ಲಿ ಸಮರ್ಥ ನಾಯಕರುಗಳು ಇದ್ದರೂ ಜಾತಿ ಅನ್ನುವ ಲೆಕ್ಕಚಾರದ ಆಟ ಆಡುತ್ತಿದೆ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದಾರೆ.

ಪುತ್ತೂರಿನಲ್ಲಿ ಗೌಡ ಸಮುದಾಯ ಅತೀ ಹೆಚ್ಚಿನ ಮತದಾರರನ್ನು ಹೊಂದಿದೆ. ಇವರಿಗೆ ಸಮವಾಗಿ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ನಂತರದ ಸ್ಥಾನದಲ್ಲಿ ಬಂಟ, ಬಿಲ್ಲವ ಸಮುದಾಯ ಇದ್ದು, ಪರಿಶಿಷ್ಟ ಜಾತಿ, ಪಂಗಡ, ಬ್ರಾಹಣ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇದನ್ನೆಲ್ಲಾ ಗಮನಿಸಿಕೊಂಡೇ ಜಾತಿ ರಾಕೀಯದ ಲಾಭ ಪಡೆಯಲು ನಳೀನ್ ಕುಮಾರ್‍ ಕಟೀಲ್ ಯೋಚನೆ ಮಾಡುತ್ತಿದ್ದಾರೆ ಅನ್ನುವ ಆಕ್ರೋಶ ಬಿಜೆಪಿ ಕಾರ್ಯಕರ್ತರದ್ದು. ಅಂದು ಹಿಂದುತ್ವದ ಆಧಾರದಲ್ಲೇ ಗೆದ್ದ ಸಂಸದರಿಗೆ ಇಂದು ಜಾತಿಯೇ ಮುಖ್ಯ ಆಯಿತೇ ಅನ್ನುವ ಮಾತುಗಳು ಕಾರ್ಯಕರ್ತರ ವಲಯದಿಂದ ಕೇಳಿಬರುತ್ತಿದೆ.

ಅಂದು ಸಂಘಪರಿವಾರ, ಬಿಜೆಪಿ ಕಾರ್ಯಕರ್ತರ ಒಕ್ಕೊರಲಿಗೆ ಬೆಲೆಯಿತ್ತು, ಆದರೆ ಇಂದು ಕಾರ್ಯಕರ್ತರ ಭಾವನೆಗೆ ಬೆಲೆಯೇ ಇಲ್ಲ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಪುತ್ತೂರಿನಲ್ಲಿ ಯಾರನ್ನು ನಿಲ್ಲಿಸಿದರೂ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ಬೆಳವಣಿಗೆಯಲ್ಲಿರುವಾಗ ಜಾತಿ ಲೆಕ್ಕಾಚಾರ ನೋಡುವುದು ಎಷ್ಟು ಸರಿ.? ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡುವ ಮಂದಿಗೆ ಟಿಕೆಟ್ ನೀಡಬೇಕು. ಜಾತಿ ಲೆಕ್ಕಾಚಾರದಲ್ಲಿ ಸೀಟು ಕೊಟ್ಟರೆ ವೋಟು ಜಾತಿ ಲೆಕ್ಕ ಮಾಡಿದರೆ ಹೇಗಾದಿತೂ.? ಎಂದು ಆಕ್ರೋಶ ಮಾತುಗಳು ಕೇಳಿ ಬಂದಿವೆ.

ಈಗ ಪುತ್ತೂರು ಕ್ಷೇತ್ರಕ್ಕೆ ಬೇರೆ ಕ್ಷೇತ್ರದ ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ. ಹೀಗೆ ಆದಲ್ಲಿ ಸಮಯೋಚಿತವೇ? ಪುತ್ತೂರು ಕ್ಷೇತ್ರದಲ್ಲಿ ನಾಯಕರು ಇಲ್ಲವೇ? ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಜಾತಿ ಲೆಕ್ಕಾಚಾರದ ಆಧಾರದಲ್ಲಿಯೇ ಮುಂದುವರಿದರೇ ಮುಂದಕ್ಕೆ ಮತ ಪ್ರಚಾರಕ್ಕೂ ಕಾರ್ಯಕರ್ತರು ಸಿಗುವುದಿಲ್ಲ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!