Friday, June 5, 2026
spot_imgspot_img
spot_imgspot_img

ಪುತ್ತೂರು: ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ಯುವಕನ ಅಸಭ್ಯ ವರ್ತನೆ ಪ್ರಕರಣ; ಹಿಂದೂ ಸಂಘಟನೆ ಕಾರ್ಯಕರ್ತರು, ಮಹಿಳೆಯರಿಂದ ರಸ್ತೆ ತಡೆದು ಖಂಡನಾ ಸಭೆ

- Advertisement -
- Advertisement -

ಪುತ್ತೂರು: ತಿಂಗಳಾಡಿಯಲ್ಲಿ ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಈ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಅರುಣ್‌ ಪುತ್ತಿಲ ಮಾತಾನಾಡಿ “ಹಿಂದೂ ಸಮಾಜದ ಭಾವನೆಗಳಿಗೆ ನೋವನ್ನು ಮಾಡುವಂತ ಪ್ರಯತ್ನವನ್ನು ಮಾಡಿದ್ದಾರೆ ಮತ್ತೆ ರಕ್ತಪಾತ ಆಗಬಹುದು. ಲವ್‌ಜಿಹಾದ್‌ ಮೂಲಕ ಹಿಂದೂ ಯುವತಿಯರ ಮೇಲೆ ನಿರಂತರವಾಗಿ ನಡೆವಂತಹ ಆಕ್ರಮನಗಳು ಇವೆಲ್ಲದಕ್ಕೆ ಶಾಶ್ವತ ಪರಿಹಾರವನ್ನು ಕೊಡುವಂತಹ ವ್ಯವಸ್ಥೆಯನ್ನು ಮಾಡಿ, ಇಲ್ಲದಿದ್ದಾರೆ ಮುಂದಿನ ದಿವಸದಲ್ಲಿ ರಸ್ತೆಯಲ್ಲಿ ಯಾವುದೇ ಮತಾಂಧರರು ಅನಾಚಾರವನ್ನು ಮಾಡುತ್ತಾರೋ ಅಂತವರು ಬೀದಿ ಹೆಣವಾಗಿ ಅವರನ್ನು ನೋಡುವಂತಹ ವಾತಾವರಣವನ್ನು ಮಾಡುದಕ್ಕೆ ಅಸ್ಪದವನ್ನು ಕೊಡುವುದಕ್ಕೆ ಹಿಂದೂ ಸಮಾಜ ಸದೃಡವಾಗಿದೆ ” ಎಂದು ಆಕ್ರೋಶ ಹೊರಹಾಕಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಹಿಂದು ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯ ಪ್ರವೀಣ್ ಶೆಟ್ಟಿ, ಜಯಲಕ್ಷ್ಮಿ ಬಲ್ಲಾಳ್ ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ವಿಠ್ಠಲ ರೈ ಮಿತ್ತೋಡಿ ಅಲ್ಲದೆ ಬಿಜೆಪಿ ಮುಖಂಡರುಗಳಾದ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಸೀತಾರಾಮ ರೈ ಕೆದಂಬಾಡಿಗುತ್ತು, ನಿತೀಶ್ ಕುಮಾರ್ ಶಾಂತಿವನ, ರಾಜೇಶ್ ರೈ, ಪರ್ಪುಂಜ, ನಾರಾಯಣ ಪೂಜಾರಿ, ಕುರಿಕ್ಕಾರ ಸಹಿತಿ ಹಲವು ಮಂದಿ ಉಪಸ್ಥಿತರಿದ್ದರು. ರವಿಕುಮಾರ್ ಕೈತಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಮಾರ್ ಕೆದಂಬಾಡಿಮಠ ವಂದಿಸಿದರು.

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

vtv vitla
- Advertisement -

Related news

error: Content is protected !!