Tuesday, September 1, 2026
spot_imgspot_img
spot_imgspot_img

ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಹೀರೋಗಳಿಗೆ ರಾಜ್ಯಪಾಲರಿಂದ ಸನ್ಮಾನ

- Advertisement -
- Advertisement -
driving

ಬೆಂಗಳೂರು: ಜಪಾನ್​ನ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಿ ಪದಕ್ಕೆ ಗೆದ್ದ ಕ್ರೀಡಾಪಟುಗಳಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಬೆಂಗಳೂರಿನಲ್ಲಿ ಸನ್ಮಾನ ಮಾಡಿದರು.

ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ರಜತ ಪದಕ ವಿಜೇತ ಸುಹಾಸ್ ಯತಿರಾಜ್, ಕ್ರೀಡಾಪಟುಗಳಾದ ಶಕೀನಾ ಖಾತೂನ್, ನಿರಂಜನ್ ಮುಕುಂದನ್ ಅವರಿಗೆ ಸನ್ಮಾನ ಮಾಡಲಾಯಿತು.

ಜೊತೆಗೆ 2020ರ ಪ್ಯಾರಾಲಿಂಪಿಕ್ಸ್ ಬಾಕ್ಸಿಂಗ್ ಕೋಚ್ ಸುಬೇದಾರ್ ಸಿ.ಎ.ಕುಟ್ಟಪ್ಪ, ಸೈಕಲಿಂಗ್ ಪಟು ಕೆ.ಸಿ.ಗಣಪತಿ ಅವರಿಗೆ ಕೂಡಾ ತಲಾ 1 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಕ್ರೀಡಾ ಸಚಿವ ನಾರಾಯಣ ಗೌಡರು ಸಹ ಭಾಗಿಯಾಗಿದ್ದರು.

- Advertisement -

Related news

error: Content is protected !!