Friday, April 19, 2024
spot_imgspot_img
spot_imgspot_img

ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರವಾರ ಜಿಲ್ಲೆಯ ಡಾ. ಕಾರ್ತಿಕ್ ಹೆಗಡೆ ಕಟ್ಟೆ ನೇಮಕ

- Advertisement -G L Acharya panikkar
- Advertisement -

ಕಾರವಾರ: ಕಾರವಾರ ಜಿಲ್ಲೆಯ ಡಾ. ಕಾರ್ತಿಕ್ ಹೆಗಡೆ ಕಟ್ಟೆ ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ.

ಬ್ಲ್ಯಾಕ್ ಚೈನ್ ಟೆಕ್ನಾಲಜಿ ಮತ್ತು ಕ್ರಿಪ್ಟೊ ಕರೆನ್ಸಿ ನಿಯಂತ್ರಣದಲ್ಲಿ ಪರಿಣಿತಿ ಪಡೆದಿರುವ ಡಾ. ಕಾರ್ತಿಕ್ ಹೆಗಡೆ ಕಟ್ಟೆ ತಮ್ಮ 33ನೇ ವಯಸ್ಸಿನಲ್ಲಿಯೇ ಈ ಹುದ್ದೆಗೇರಿದ್ದಾರೆ.

ಕಾರವಾರ ಜಿಲ್ಲಾಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿ.ಪಿ.ಹೆಗಡೆ ಕಟ್ಟೆ ಹಾಗೂ ಸರಸ್ವತಿ ದಂಪತಿಯ ಪುತ್ರ. ಕಾರವಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ಅವರು, ಹುಬ್ಬಳ್ಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಚಿನ್ನದ ಪದಕದೊಂದಿಗೆ ಮುಗಿಸಿದ್ದರು.

ಅನಧಿಕೃತ ಹಣದ ಚಲಾವಣೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ನಿರಂತರ ಪರಿಣಾಮ ನಿಯಂತ್ರಣಕ್ಕೆ ಕೆ.ವೈ. ಪ್ರೋಟೊಕಾಲ್ ಹಾಗೂ ಕೆ.ವೈ. ಇಂಡೆಕ್ಸ್ ಎಂಬ ವಿಧಾನಗಳನ್ನು ರೂಪಿಸಿದ್ದರು.

ಈ ಕುರಿತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 48 ವೈಜ್ಞಾನಿಕ ಲೇಖನಗಳನ್ನು ಸಹ ಡಾ. ಕಾರ್ತಿಕ್ ಪ್ರಕಟಿಸಿದ್ದಾರೆ. ಬ್ಲಾಕ್‌ ಚೈನ್ ಕುರಿತಂತೆ 10 ಪುಸ್ತಕಗಳನ್ನು ಮತ್ತು ಒಂದು ವೈಜ್ಞಾನಿಕ ಕಾದಂಬರಿಯನ್ನು ಪ್ರಕಟಿಸಿದ್ದಾರೆ.

- Advertisement -

Related news

error: Content is protected !!