Monday, June 8, 2026
spot_imgspot_img
spot_imgspot_img

ಬಂಟ್ವಾಳ: ಅರಣ್ಯ ಪ್ರದೇಶದಲ್ಲಿ ಕಸಗಳ ರಾಶಿ; ತಕ್ಷಣ ಕ್ರಮ ಕೈಗೊಂಡ ಪಂಚಾಯತ್ ಅಧ್ಯಕ್ಷ

- Advertisement -
- Advertisement -

ಬಂಟ್ವಾಳ: ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಕಸಗಳ ರಾಶಿ ಬಿದ್ದಿದ್ದು, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ತಕ್ಷಣ ಕಾರ್ಯಪ್ರವೃತ್ತರಾದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕು, ವೀರಕಂಬ ಗ್ರಾಮದ ವೀರಕಂಬ ಅನಂತಾಡಿ ರಸ್ತೆಯ ಮೈರಾ ಪ್ರದೇಶದ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಕಸಗಳನ್ನು ತಂದು ರಾಶಿ ಹಾಕಿದ್ದು, ಗ್ರಾಮಸ್ಥರಿಂದ ಮಾಹಿತಿ ತಿಳಿದ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೂಡಲೇ ಭೇಟಿ ನೀಡಿ ಕಾರ್ಯಪ್ರವೃತ್ತರಾಗಿ ಕಸ ಹಾಕಿದವರ ಮಾಹಿತಿ ಕಲೆಹಾಕಿ ಅವರಿಗೆ ಎಚ್ಚರಿಕೆ ನೀಡಿ ಕಸವನ್ನು ತೆರೆವು ಮಾಡುವಂತೆ ಕ್ರಮ ಕೈಗೊಂಡರು.

ಅದೇ ರೀತಿ ಇನ್ನು ಮುಂದೆ ಯಾರಾದರೂ ಕಸವನ್ನು ಎಸೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು . ಜೊತೆಗೆ ಗ್ರಾಮಸ್ಥರು ಈ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಅನಂತಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ರಾಮ್ ಪ್ರಸಾದ್ ಕೊಂಬಿಲ, ಅರಣ್ಯ ಇಲಾಖೆ ಅಧಿಕಾರಿ ರಂಜಿತಾ ಮೊದಲಾದವರು ಜೊತೆಗಿದ್ದರು.

- Advertisement -

Related news

error: Content is protected !!