Sunday, May 19, 2024
spot_imgspot_img
spot_imgspot_img

ಬಂಟ್ವಾಳ: ಕಾರುಗಳ ನಡುವೆ ಅಪಘಾತ – ಬೆಂಗಳೂರು ನಿವಾಸಿ ಮೃತ್ಯು, ನಾಲ್ವರಿಗೆ ಗಾಯ

- Advertisement -G L Acharya panikkar
- Advertisement -

ಬಂಟ್ವಾಳ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಬೆಂಗಳೂರು ನಿವಾಸಿಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಬೆಂಗಳೂರು ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಮೃತರಾಗಿದ್ದಾರೆ. ಚಾಲಕ ಪ್ರಜ್ವಲ್ (22) ಸಹಿತ ನಾಲ್ವರು ಗಾಯಗೊಂಡಿದ್ದಾರೆ.

vtv vitla
vtv vitla

ಬೆಂಗಳೂರಿನಿಂದ ಬರುತ್ತಿದ್ದ ಕಾರನ್ನು ಪ್ರಜ್ವಲ್ ಚಲಾಯಿಸುತ್ತಿದ್ದು , ಲಕ್ಷ್ಮಣ ಆಚಾರಿ ಅವರು ಪುತ್ರಿಯ ವಿವಾಹ ಆಮಂತ್ರಣ ನೀಡುವ ನಿಟ್ಟಿನಲ್ಲಿ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ. ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನವರಿಗೆ ಮಾಣಿ ಜಂಕ್ಷನ್ ನಲ್ಲಿ ರಸ್ತೆ ತಪ್ಪಿ ಬೆಂಗಳೂರು ಮಾರ್ಗದಲ್ಲಿ ಮುಂದುವರಿದ್ದಾರೆ. ಈ ಸಮಯ ಬುಡೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಪ್ರೆಂಡ್ಸ್ ವಿಟ್ಲ ತಂಡ ವಾಹನವನ್ನು ಸ್ಥಳದಿಂದ ತೆರವು ಮಾಡಿ ಠಾಣೆಗೆ ತಲುಪಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!