Tuesday, May 7, 2024
spot_imgspot_img
spot_imgspot_img

ಬಂಟ್ವಾಳ: ಮೀನುಗಾರಿಕೆ ಇಲಾಖೆಯಿಂದ ಸ್ವ ಉದ್ಯೋಗ ಕಲ್ಪಿಸುವ ಯೋಜನೆ; ಸಚಿವ ಎಸ್.ಅಂಗಾರ

- Advertisement -G L Acharya panikkar
- Advertisement -

ಬಂಟ್ವಾಳ: ಮೀನಿನ ಉತ್ಪಾದನೆ, ಮಾರುಕಟ್ಟೆ ಹಾಗೂ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯೂ ನಿರಂತರ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು , ಇದರಿಂದ ಸ್ವ ಉದ್ಯೋಗ ವನ್ನು ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

ಅವರು ಒಡ್ಡೂರು ಗಂಜಿಮಠ ಒಡ್ಡೂರು ಪಾರ್ಮ್ಸ್ ನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ನಡೆದ ಒಳನಾಡು ಮೀನುಕೃಷಿ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

vtv vitla
vtv vitla

ರೈತ ಈ ದೇಶದ ಬೆನ್ನೆಲುಬು ಆಗಬೇಕಾದರೆ ರೈತನಿಗೆ ನಿರಂತರವಾಗಿ ಆದಾಯ ಬರುವ ಕೆಲಸ ಆಗಬೇಕು, ದುಡಿಮೆಗೆ ಹಾಗೂ ಆದಾಯ ಬರುವ ರೀತಿಯ ವ್ಯವಸ್ಥೆ ಕಲ್ಪಿಸಬೇಕು, ಉತ್ಪಾದನೆಗೆ ಮಾರುಕಟ್ಟೆಯ ಅವಕಾಶ ನೀಡಬೇಕು, ಮಾರುಕಟ್ಟೆ ಯ ಜೊತೆ ಗುಣಮಟ್ಟವನ್ನು ಕಾಪಾಡುವ ಕೆಲಸ ಆಗಬೇಕು ಎಂದರು. ಮೀನುಕೃಷಿ ಮಾಡುವ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಇಲಾಖೆಯಿಂದ ಆಗಬೇಕಾಗಿದೆ.

ಸ್ಥಳೀಯ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ಮೀನು ತಳಿ ಸಾಕಣೆಗೆ ಪ್ರೋತ್ಸಾಹ ನೀಡುತ್ತೇವೆ ಹಾಗಾಗಿ ಮಡೆಂಜಿ ತಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಉತ್ಪಾದನೆ ಜಾಸ್ತಿಯಾದಗೆ ಬೇಡಿಕೆಗಳು ಜಾಸ್ತಿಯಾಗುತ್ತದೆ. ನಿರುದ್ಯೋಗ ನಿವಾರಣೆಗಾಗಿ ಆತ್ಮ ನಿರ್ಭರ ಭಾರತದ ಕಲ್ಪನೆಯಲ್ಲಿ ಆರ್ಥಿಕವಾಗಿ ಬಲಿಷ್ಠರಾಗಲು ಸ್ವ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತೇವೆ.

ಜನರ ಮನೆಯ ಬಾಗಿಲಿಗೆ ಮೀನು ತಲುಪಿಸುವ ಉದ್ದೇಶದಿಂದ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತೀ ತಾಲೂಕಿನಲ್ಲಿ ಯೂಕೋಲ್ಡ್ ಸ್ಟೋರೇಜ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಯ ವ್ಯವಸ್ಥೆ ಆಗಬೇಕು, ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚು ಗಮನ ಹರಿಸಿಬೇಕು.ಕೃಷಿಗೆ ಪೂರಕವಾದ ಮಾಹಿತಿ ಮತ್ತು ಸಾಕಾಣಿಕೆ ಗೆ ಇಲಾಖೆ ಪ್ರೋತ್ಸಾಹ ನೀಡಬೇಕು.ಕೋವಿಡ್ ಮಾಹಮಾರಿಯ ಸಂದರ್ಭದಲ್ಲಿ ಜಗತ್ತಿನ ಆರ್ಥಿಕ ವ್ಯವಸ್ಥೆ ಸದೃಢ ವಾಗಿರಲು ಇಲ್ಲಿನ ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಾಯಿತು.ಮುಂದಿನ ಜನಾಂಗಕ್ಕೆ ಲಾಭ ಪಡೆಯಲು ಯಾವ ರೀತಿ ಮತ್ತು ಯಾವ ಕೃಷಿಯನ್ನು ಮಾಡಬೇಕು ಎಂಬ ಮಾಹಿತಿ ಯನ್ನು ನೀಡುವ ಕೆಲಸ ಇಲಾಖೆಯ ಮೂಲಕ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ , ಮೀನು ಸಾಕಣೆ ಯ ಬಗ್ಗೆ ಮಾಹಿತಿ ಕೊರತೆ ಇದ್ದು, ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿದ್ದು,ಕೃಷಿಕರು ಇತರ ಕೃಷಿಯ ಜೊತೆ ಮೀನು ಸಾಕಾಣೆಯಲ್ಲಿ ಸಂಪೂರ್ಣ ವಾಗಿ ತೊಡಗಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದರು.

- Advertisement -

Related news

error: Content is protected !!