Thursday, June 18, 2026
spot_imgspot_img
spot_imgspot_img

ಬಂಟ್ವಾಳ: ಯುವಕನಿಗೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ; ದೂರು ದಾಖಲು

- Advertisement -
- Advertisement -

ಫರಂಗಿಪೇಟೆ: ಕೆಲಸ ಬಿಟ್ಟು ಮನೆಗೆ ಮರಳುತ್ತಿದ್ದ ಯುವಕನಿಗೆ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಾರಿಪಳ್ಳ ಕಡೆಗೋಳಿ ಬಳಿ ನಡೆದಿದೆ.

ದಿನಾಂಕ 17/05/2022 ಮಂಗಳವಾರದಂದು ರಾತ್ರಿ ಕೆಲಸ ಬಿಟ್ಟು ಮನೆಗೆ ಮರಳುತ್ತಿದ್ದ ತುಂಬೆ ರೊಟ್ಟಿಗುಡ್ಡೆ ನಿವಾಸಿ ನಫೀಲ್‌ (17) ಫೋನ್ ಬಂದ ಕಾರಣ ಮಾರಿಪಳ್ಳ ಕಡೆಗೋಳಿ ಬಳಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದಾಗ ಅಪರಿಚಿತರು ಬಂದು ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ಧಾರೆ ಎನ್ನಲಾಗಿದೆ. “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ ಒಬ್ಬಾತ ಅಲ್ಲಿಯೇ ಇದ್ದ ಮರದ ತುಂಡಿನಿಂದ ಮುಖಕ್ಕೆ ಕೆನ್ನೆಗೆ ಎದೆಯ ಭಾಗಕ್ಕೆ ತಲೆಗೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೊಳಗಾದ ನಫೀಲ್‌’ನನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಮೂವರೂ ಹುಡುಗರು ತುಳುವಿನಲ್ಲಿ ಬೈಯುತ್ತಿದ್ದು ಅದೇ ಪರಿಸರದವರಾಗಿದ್ದು ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ ಎಂಬುವುದಾಗಿಯೂ ಮೂರೂ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿರುತ್ತಾರೆ.

- Advertisement -

Related news

error: Content is protected !!