Monday, May 6, 2024
spot_imgspot_img
spot_imgspot_img

ಬಂಟ್ವಾಳ: ವೀಕೆಂಡ್ ಕರ್ಪ್ಯೂ ಸಂಧರ್ಭ ಅಕ್ರಮವಾಗಿ ದನದ ಮಾಂಸ ಮಾರಾಟ; ಆರೋಪಿಯ ಬಂಧನ

- Advertisement -G L Acharya panikkar
- Advertisement -

ಬಂಟ್ವಾಳ: ವಿಕೇಂಡ್ ಕರ್ಪ್ಯೂ ಜಾರಿಯ ಸಂದರ್ಭದಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡಲು ಸಾಗಾಣಿಕೆ ಮಾಡುವ ವೇಳೆ ದಾಳಿ ನಡೆಸಿದ ಗ್ರಾಮಾಂತರ ಎಸ್.ಐ.ಹರೀಶ್ ಆರೋಪಿ ಸಹಿತ ಸಾವಿರಾರು ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಪಟ್ಲ ನಿವಾಸಿ ಅಬ್ದುಲ್‌ ಖಾದರ್‌ ಪ್ರಾಯ (30) ಎನ್ನಲಾಗಿದೆ.

ಬಂಧಿತನಿಂದ ಒಟ್ಟು 60 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ವೀಕೆಂಡ್ ಲಾಕ್ ಡೌನ್ ಕರ್ಪೂ ಜ್ಯಾರಿ ಇದ್ದ ಕಾರಣ ರೌಂಡ್ಸ್ ಕರ್ತವ್ಯದಲ್ಲಿದ್ದ ಗ್ರಾಮಾಂತರ ಎಸ್.ಐ.ಹರೀಶ್ ಅವರು ನಾವೂರು ಮಸೀದಿಯ ಮುಂದೆ ಹೋಗುತ್ತಿದ್ದಂತೆ ಸರಪಾಡಿ ಕಡೆಯಿಂದ ಒಂದು ಅಟೋ ರಿಕ್ಷಾ ಮಣಿಹಳ್ಳ ಕಡೆಗೆ ಅತೀ ವೇಗವಾಗಿ ಬರುತ್ತಿದ್ದು ಸಂಶಯಗೊಂಡ ಎಸ್.ಐ. ರಿಕ್ಷಾವನ್ನು ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚನೆ ನೀಡಿದಾಗ ಅಟೋ ರಿಕ್ಷಾದ ಚಾಲಕ ರಿಕ್ಷಾವನ್ನು ಸ್ವಲ್ಪ ದೂರ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ್ದ ಆತನನ್ನು ಹಿಡಿದು ವಿಚಾರಿಸಿದಾಗ ಅಟೋ ರಿಕ್ಷಾದ ಹಿಂದಿನ ಸೀಟಿನ ಕೆಳಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ ದನದ ಮಾಂಸ ತುಂಬಿಸಿದ್ದ.

‌ಮಾರಾಟ ಮಾಡುವ ಉದ್ದೇಶದಿಂದ ಅಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಈತ ಸ್ವತಃ ಮನೆಯಲ್ಲಿ ಸಾಕಿದ ಒಂದು ದನವನ್ನು ವಧೆ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುವರೇ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

2 ಕೆ.ಜಿ ತೂಕದ ಒಟ್ಟು 15 ಪ್ಯಾಕೆಟ್ ಇದ್ದು ಒಟ್ಟು 30 ಕೆ.ಜಿ ಮಾಂಸವನ್ನು ಇಡಲಾಗಿತ್ತು. 15 ಕಟ್ಟು ಮಾಂಸದ ಅಂದಾಜು ಬೆಲೆ ರೂ 7,500/- ಆಗಿದ್ದು. ಮತ್ತು ಅಟೋ ರಿಕ್ಷಾದ ಅಂದಾಜು ಬೆಲೆ ರೂ 60,000/- ಆಗಿದ್ದು, ಮಾಂಸ ಸಹಿತ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!