Sunday, April 28, 2024
spot_imgspot_img
spot_imgspot_img

ಬಳಕೆದಾರರ ಭದ್ರತೆಗಾಗಿ ವಾಟ್ಸ್​ಆ್ಯಪ್ ವೆಬ್​ನಲ್ಲಿ ಬರಲಿದೆ ಹೊಸ ಫೀಚರ್ಸ್​; ಸಂಪೂರ್ಣ ಮಾಹಿತಿ ಇಲ್ಲಿದೆ

- Advertisement -G L Acharya panikkar
- Advertisement -

ವಾಟ್ಸ್‌ಆ್ಯಪ್ ತನ್ನ ಗೌಪ್ಯತೆ(Privacy) ಬಗ್ಗೆ ಎಷ್ಟೇ ದೃಢಪಡಿಸುತ್ತಿದ್ದರೂ ಗ್ರಾಹಕರು ನಂಬಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ವಾಟ್ಸ್‌ಆ್ಯಪ್(WhatsApp) ಸಂಸ್ಥೆಯ ಮೇಲಿದ್ದ ಆರೋಪಗಳು ಇದಕ್ಕೆ ಕಾರಣ. ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಆಗಿವೆ ಎಂದು ಸಂಸ್ಥೆ ಎಷ್ಟೇ ಹೇಳಿದರೂ ಜನರು ಒಮ್ಮೆ ನಂಬಿಕೆ ಹೋದ ಮೇಲೆ ಮತ್ತೆ ವಿಶ್ವಾಸ ಇರಿಸುವ ಗೋಜಿಗೆ ಹೋಗುತ್ತಿಲ್ಲ.ಇದೀಗ ಸಂಸ್ಥೆಯು ಬಳಕೆದಾರರ ಭದ್ರತೆಗಾಗಿ ಹೊಸ ಫೀಚರ್‌ವೊಂದನ್ನು ಪರಿಚಯಿಸಲು ಮುಂದಾಗಿದೆಯಂತೆ. ಮೆಟಾ(Meta-Owned) ಒಡೆತನದ ವಾಟ್ಸ್‌ಆ್ಯಪ್ ತನ್ನ ಡೆಸ್ಕ್‌ಟಾಪ್ ಆ್ಯಪ್ ಹಾಗೂ ವೆಬ್ ಆವೃತ್ತಿಗೆ(Web Version) ಎರಡು ಹಂತದ ಹೊಸ ದೃಢೀಕರಣವನ್ನು ಪರಿಚಯಿಸಲಿದೆ. ಇದರಿಂದ ಅನಧಿಕೃತ ಲಾಗಿನ್ ಅಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಈ ಕ್ಷಿಪ್ರ ಸಂದೇಶ ವೇದಿಕೆಯು ಬಳಕೆದಾರರಿಗೆ ಅದರ ಮೇಲೆ ಮತ್ತಷ್ಟು ನಿಯಂತ್ರಣವನ್ನು ಒದಗಿಸಲು ಮುಂದಾಗಿದೆ.

vtv vitla
vtv vitla

ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದರೂ, ಸಾರ್ವತ್ರಿಕವಾಗಿ ಬಿಡುಗಡೆಯಾದಾಗ ಡೆಸ್ಕ್‌ಟಾಪ್ ಅಥವಾ ವೆಬ್ ಬಳಕೆದಾರರಿಗೆ ಮತ್ತಷ್ಟು ಸುರಕ್ಷತೆಯನ್ನು ಒದಗಿಸಲಿದೆ. ಹಲವಾರು ವ್ಯಕ್ತಿಗಳು ಸಂವಹನಕ್ಕಾಗಿ ವಾಟ್ಸ್‌ಆ್ಯಪ್ ಅವಲಂಬಿಸಿರುವಂತೆಯೇ ಕ್ರಿಮಿನಲ್‍ಗಳು ವಾಟ್ಸ್‌ಆ್ಯಪ್ ಬಳಕೆದಾರರನ್ನು ದುರುಪಯೋಗಪಡಿಸಿಕೊಂಡು ಹಗರಣಗಳನ್ನು ನಡೆಸಲು ಹೊಂಚು ಹಾಕುತ್ತಿರುವ ಸಂಗತಿಯನ್ನೂ ವಾಟ್ಸ್‌ಆ್ಯಪ್ ಪರಿಗಣಿಸಿದೆ ಎಂದು WABetainfo ವರದಿ ಮಾಡಿದೆ.

ಪರಿಶೀಲನಾ ಕಾರ್ಯ

WABetainfo ಪ್ರಕಾರ, ಭವಿಷ್ಯದಲ್ಲಿ ಡೆಸ್ಕ್‌ಟಾಪ್ ಆ್ಯಪ್ ಹಾಗೂ ಬ್ರೌಸರ್ ಆವೃತ್ತಿಗೆ 2 ಹಂತದ ದೃಢೀಕರಣವನ್ನು ಪರಿಚಯಿಸಲು ವಾಟ್ಸ್‌ಆ್ಯಪ್ ಮುಂದಾಗಿದೆ. ಈ ಎರಡು ಹಂತದ ಪರಿಶೀಲನಾ ಕಾರ್ಯವನ್ನು ಆನ್‍ಲೈನ್ ಅಥವಾ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಚಾಲನೆಯಲ್ಲಿಡಬಹುದಾಗಿದೆ ಅಥವಾ ನಿಶ್ಚಲನೆಗೊಳಿಸಬಹುದಾಗಿದೆ ಎಂದು WABetainfo ಬಿಡುಗಡೆ ಮಾಡಿರುವ ಸ್ಕ್ರೀನ್‌ಶಾಟ್ ಹೇಳುತ್ತಿದೆ.

“ವೆಬ್/ಡೆಸ್ಕ್‌ಟಾಪ್ ಬಳಕೆದಾರರು 2 ಹಂತದ ದೃಢೀಕರಣವನ್ನು ಚಾಲನೆಯಲ್ಲಿಡಬಹುದಾಗಿದೆ ಅಥವಾ ನಿಶ್ಚಲನೆಗೊಳಿಸಬಹುದಾಗಿದೆ. ಈ ಹಂತಗಳು ವಿಶೇಷವಾಗಿ ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡು ಪಿನ್ ನಂಬರ್ ಮರೆತು ಹೋದಾಗ ತೀರಾ ಕ್ಲಿಷ್ಟವಾಗುತ್ತವೆ. ಒಂದೊಮ್ಮೆ ನೀವು ತಕ್ಷಣದಲ್ಲಿ ನಿಮ್ಮ ಮೇಲ್ ಖಾತೆಗೆ ಪ್ರವೇಶ ಪಡೆಯಲು ಸಾಧ‍್ಯವಾಗದಿದ್ದರೆ, ನೀವು ಅದಕ್ಕಾಗಿ ಮರುಸ್ಥಾಪನೆಯ ಕೊಂಡಿಗೆ ಕೋರಿಕೆ ಸಲ್ಲಿಸಿ ಮರುಸ್ಥಾಪಿಸಿಕೊಳ್ಳಬಹುದಾಗಿದೆ” ಎಂದು WABetainfo ಹೇಳಿದೆ.

ಲಾಗಿನ್‍ ಪಿನ್

ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ವಾಟ್ಸ್‌ಆ್ಯಪ್‌ಗೆ ನೋಂದಾಯಿಸಿಕೊಳ್ಳುವ ಮುನ್ನ ವೈಯಕ್ತಿಕ ಪಿನ್ ನಮೂದಿಸಬೇಕಾಗುತ್ತದೆ. ಎರಡು ಹಂತದ ದೃಢೀಕರಣ ಪ್ರಕ್ರಿಯೆ ಈಗಾಗಲೇ ಮೊಬೈಲ್ ಆವೃತ್ತಿಯಲ್ಲಿ ಲಭ್ಯವಿದೆ. ನೀವು ಹೊಸ ಮೊಬೈಲ್ ಫೋನ್‍ನೊಂದಿಗೆ ವಾಟ್ಸ್‌ಆ್ಯಪ್‌ಗೆ ನೋಂದಾಯಿಸಿಕೊಳ್ಳಲು ಹೊರಟಾಗ ನಿಮಗೆ ಸ್ವಯಂಚಾಲಿತವಾಗಿ ಉತ್ಪತ್ತಿಯಾಗುವ ಆರು ಅಂಕಿಯ ಸಂಕೇತ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ರವಾನೆಯಾಗುತ್ತದೆ.

ಆದರೆ, ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸಲು ಬಳಕೆದಾರರು ಕೇವಲ ವಾಟ್ಸ್‌ಆ್ಯಪ್‌ ವೆಬ್ ರೂಪವನ್ನು ತೆರೆದರೆ ಸಾಕು, ಅವರ ಸಂವಾದಗಳು, ಚಿತ್ರಗಳು, ವಿಡಿಯೋಗಳು ಬ್ರೌಸರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಲಾಗಿನ್‍ಗೆ ಯಾವುದೇ ಪಿನ್ ಅಗತ್ಯವಿಲ್ಲ.

ವೈಶಿಷ್ಟ್ಯ ಪರಿಚಯ

ಡೆಸ್ಕ್‌ಟಾಪ್‌ ವಾಟ್ಸ್‌ಆ್ಯಪ್‌ ಚಾಟ್‍ಗಳನ್ನು ಮತ್ತಷ್ಟು ಉನ್ನತೀಕರಿಸಲು, ಅದಕ್ಕೆ ಪ್ರವೇಶ ಪಡೆಯುವ ಮುನ್ನ ವೈಯಕ್ತಿಕ ಪಿನ್ ಅನ್ನು ನಮೂದಿಸಬೇಕಾಗುತ್ತದೆ ಎಂದು WABetainfo ಹೇಳಿದೆ. ವಾಟ್ಸ್‌ಆ್ಯಪ್‌ ಹಿಂಬಾಲಕ WABetainfo ಪ್ರಕಾರ, ವಾಟ್ಸ್‌ಆ್ಯಪ್‌ ಎಲ್ಲ ಕಡೆಯೂ ತನ್ನ ಎರಡು ಹಂತದ ದೃಢೀಕರಣವನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಾಗಬೇಕು ಎಂಬ ಆಶಯ ಹೊಂದಿದೆ. ಹೀಗಾಗಿ ಅದು ತನ್ನ ಭವಿಷ್ಯದ ಉನ್ನತೀಕರಣದಲ್ಲಿ ವೆಬ್/ಡೆಸ್ಕ್‌ಟಾಪ್‌ ಆವೃತ್ತಿಯ ವಾಟ್ಸ್‌ಆ್ಯಪ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ಹೇಳಿದೆ.

ಹಾಗೆಯೇ ತನ್ನ ಗ್ರಾಹಕರು ಆ್ಯಂಡ್ರಾಯ್ಡ್ ಫೋನ್‍ನಿಂದ ಐಫೋನ್‍ಗೆ ತಮ್ಮ ಸಂವಾದಗಳನ್ನು ವರ್ಗಾಯಿಸಿಕೊಳ್ಳಬಲ್ಲ ಸಾಮರ್ಥ್ಯದ ಕುರಿತೂ ವಾಟ್ಸ್‌ಆ್ಯಪ್‌ ಪರೀಕ್ಷೆ ನಡೆಸುತ್ತಿದೆ ಎಂದೂ ಹೇಳಲಾಗಿದೆ. ಈ ಹೊಸ ವೈಶಿಷ್ಟ್ಯವನ್ನು ನೂತನ ವಾಟ್ಸ್‌ಆ್ಯಪ್‌ ಬೀಟಾ iOS v22.2.74ದಲ್ಲಿ ಅಳವಡಿಸಲಾಗಿದ್ದು, ಅದಿನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಈ ವೈಶಿಷ್ಟ್ಯವು ಸಾಮಾನ್ಯ ಸಾರ್ವಜನಿಕರಿಗೆ ಸದ್ಯ ಅಲಭ್ಯವಾಗಿದೆ. ತನ್ನ ಗ್ರಾಹಕರ ಸಂವಾದಗಳನ್ನು ಐಫೋನ್‍ಗೆ ವರ್ಗಾಯಿಸಲು ಮೂವ್ ಟು ಐಒಎಸ್ ಎಂಬ ತಂತ್ರಾಂಶವನ್ನು ಅವಲಂಬಿಸಿರುವಂತೆ ಕಾಣಿಸುತ್ತಿದೆ.

vtv vitla
vtv vitla
- Advertisement -

Related news

error: Content is protected !!