Friday, April 26, 2024
spot_imgspot_img
spot_imgspot_img

ಬಾಣಂತಿ ಡಿಸ್ಚಾರ್ಜ್‌ಗೆ 6 ಸಾವಿರ ಲಂಚ ಕೇಳಿದ ವೈದ್ಯರು..! ವೈದ್ಯರ ಹಣದಾಹಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

- Advertisement -G L Acharya panikkar
- Advertisement -

ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಪಡೆಯುವ ಬಡವರನ್ನು ಅಲ್ಲಿನ ಸಿಬ್ಬಂದಿ ವರ್ಗ, ವೈದ್ಯರು ಯಾವ ರೀತಿ ಸುಲಿಗೆ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಲ್ಲಿನ ಇಬ್ಬರು ವೈದ್ಯರು ಮಹಿಳೆಯೊಬ್ಬರ ಹೆರಿಗೆ ಮಾಡಿದ್ದಕ್ಕೆ ಪ್ರತಿಯಾಗಿ ಆರು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಲಂಚ ಕೇಳಿದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಆರೋಗ್ಯ ಇಲಾಖೆಯು ಆ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತು ಮಾಡಿದೆ.

ಲಂಚ ಪಡೆದ ಇಬ್ಬರು ವೈದ್ಯರನ್ನು ಇದೀಗ ಅಮಾನತು ಮಾಡಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯ ಅವರನ್ನು ಅಮಾನತು ಮಾಡಿ ರಾಮನಗರ ಡಿಹೆಚ್ಓ ಆದೇಶ ನೀಡಿದ್ದಾರೆ.

ಇದು ಸರ್ಕಾರಿ ಆಸ್ಪತ್ರೆ, ಆದರೂ ಇಲ್ಲಿ ಹೆರಿಗೆ ಮಾಡಿಸಬೇಕು ಅಂದ್ರೆ ಲಂಚ ಕೊಡಲೇಬೇಕು. ಅದೂ 6 ಸಾವಿರ ರೂಪಾಯಿ! ನಾವು ಬಡವರು, ಇರೋದೇ ಇಷ್ಟು ತಗೋಳಿ ಅಂದ್ರೆ ನೋ ಅಂತಾರೆ. ಲಂಚ ಪಡೆಯೋದ್ರಲ್ಲಿ ಭೇದಭಾವ ಮಾಡಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಈ ಘಟನೆ ರಾಮನಗರದ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆರಿಗೆಗೆ ಮಹಿಳೆ ರೂಪಾ ದಾಖಲಾಗಿದ್ದರು. ಅವರ ಪತಿ ಬಳಿ ವೈದ್ಯರಾದ ಡಾ.ಶಶಿಕಲಾ ಹಾಗೂ ಡಾ. ಐಶ್ವರ್ಯ 6 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಮೇಡಂ, ನನ್ನ ಬಳಿ ಇರೋದೇ 2 ಸಾವಿರ ರೂಪಾಯಿ. ನಾನು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡೋದು, ಇನ್ನೂ ಸಂಬಳ ಕೂಡ ಆಗಿಲ್ಲ. ಇರೋದು 2 ಸಾವಿರ ಮಾತ್ರ, ಹೆಚ್ಚು ಕೊಡಲು ಆಗಲ್ಲ ಮೇಡಂ ಎಂದು ರೂಪಾ ಅವರ ಪತಿ ಹೇಳಿದ್ದಾರೆ.

ಇದಕ್ಕೆ ಒಪ್ಪದ ವೈದ್ಯೆಯರು, ನೀವು ಕೊಡೋ ಹಣವನ್ನು ನಾವು ಎಲ್ಲರಿಗೂ ಹಂಚಬೇಕು. ಪ್ರತಿಯೊಬ್ಬರಿಗೂ ಎರಡು ಸಾವಿರ ರೂ. ಕೊಡಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಲ್ಲ, 6 ಸಾವಿರ ಫಿಕ್ಸ್​. 2 ಸಾವಿರ ಅವರಿಗೆ, 2 ಸಾವಿರ ಇವರಿಗೆ, 2 ಸಾವಿರ ನನಗೆ… ಎಂದು ವೈದ್ಯೆ ಹೇಳಿದ್ದಾರೆ.

- Advertisement -

Related news

error: Content is protected !!