Friday, March 29, 2024
spot_imgspot_img
spot_imgspot_img

ಬಿಜೆಪಿ ಬೂತ್ ಸಮಿತಿ ಅನಂತಾಡಿ ವತಿಯಿಂದ ದೀನ ದಯಾಳ್ ಉಪಾಧ್ಯಾಯರವರ ಜನ್ಮದಿನಾಚರಣೆ

- Advertisement -G L Acharya panikkar
- Advertisement -

ಅನಂತಾಡಿ: ಬಿಜೆಪಿ ಬೂತ್ ಸಮಿತಿ 208 ಇದರ ವಿಶೇಷ ಸಭೆಯು ಪಕ್ಷದ ಹಿರಿಯ ಕಾರ್ಯಕರ್ತರಾದ ಅನಂತಾಡಿ ಗ್ರಾಮದ ನಿಡ್ಯಾರ ಜನಾರ್ದನ ಆಚಾರ್ಯ ಅವರ ಮನೆಯಲ್ಲಿಂದು ನಡೆಯಿತು. ಸಭೆಯ ಆರಂಭದಲ್ಲಿ ದಿನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಪ್ರಭಾರಿ ರಂಜಿತ್ ಮೈರ,ಹಿರಿಯರಾದ ಜನಾರ್ದನ ಆಚಾರ್ಯ, ವಿಟ್ಲ ಪಡ್ನೂರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸನತ್ ಕುಮಾರ್ ರೈ,ಪಂಚಾಯತ್ ಅಧ್ಯಕ್ಷ ಗಣೇಶ ಪೂಜಾರಿ ಉಪಸ್ಥಿತರಿದ್ದರು.

ಜನಸಂಘದ ಅಧ್ಯಕ್ಷರಾಗಿದ್ದು ಹುಟ್ಟು ಹೋರಾಟಗಾರರಾಗಿದ್ದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ದೇಶಪ್ರೇಮಿ ಚಿಂತನೆ,ಸಂಘಟನೆ ,ವಿಚಾರಧಾರೆಯನ್ನು ಜನಮನಕ್ಕೆ ನೆನಪು ಮಾಡಿಕೊಡುವ ನಿಟ್ಟಿನಲ್ಲಿ ಬೂತ್ ಸಮಿತಿ ಅಧ್ಯಕ್ಷ ನಾಗೇಶ್ ಭಂಡಾರಿ ಪ್ರಾಸ್ತಾವಿಕವಾಗಿ ನುಡಿನಮನ ಸಲ್ಲಿಸಿದರು.

ದೀನ್ ದಯಾಳ್ ಜನ್ಮದಿನಾಚರಣೆಯನ್ನು ಭಾರತೀಯ ಜನತಾ ಪಕ್ಷವು ವಿವಿಧ ಕಾರ್ಯಯೋಜನೆಗಳ ಮೂಲಕ ವರ್ಷಂಪ್ರತಿ ಆಚರಿಸುತ್ತಿದ್ದು ಆ ನಿಟ್ಟಿನಲ್ಲಿ ಇಂದು ಅನಂತಾಡಿ ಗ್ರಾಮದ ಪ್ರತೀ ಬೂತಿನಲ್ಲಿ ಸಸಿ ನೆಡುವ (208,209,210) ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿ ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ಪ್ರಭಾರಿ ರಂಜಿತ್ ಮೈರ ಮಾತನಾಡಿದರು.

ನಮೋ ಆ್ಯಪ್ ಆನ್ಲೈನ್ ಅಭಿಯಾನ್,ಪೋಸ್ಟ್ ಕಾರ್ಡ್ ಅಭಿಯಾನ,ಸೇವಾ ಅಭಿಯಾನ ಮುಂತಾದ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಅನಾವರಣ ಗೊಳಿಸಲಾಯಿತು.ಸನತ್ ಕುಮಾರ್ ರೈಯವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣ ಪ್ರಮುಖ್ ಶಿವರಾಮ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ಕುಸುಮಾಧರ,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳಾದ,ತಿಮ್ಮಪ್ಪ ಗೌಡ ಅಶ್ವತ್ತಡಿ, ಕುಂಞಣ್ಣ ಗೌಡ ಮಠದಮೂಲೆ, ಬೂತ್ ಸಮಿತಿ ಕಾರ್ಯದರ್ಶಿಗಳಾದ ಪ್ರವೀಣ್ ಗೌಡ, ಸಂತೋಷ ಪಿಲಿಚಂಡಿಗುಡ್ಡ, ಪಂಚಾಯತ್ ಸದಸ್ಯರುಗಳಾದ ಮಮಿತಾ, ಸುಜಾತ , ಸಂಧ್ಯಾ, ರಶ್ಮಿ, ಹಿಂದುಳಿದ ಮೋರ್ಚ ಸದಸ್ಯರುಗಳಾದ ಮಹಾಬಲ ಪೂಜಾರಿ ಮತ್ತು ಶಶಿಕಲಾ ಆಚಾರ್ಯ, ಹಾಗೂ ಪಕ್ಷದ ವಿವಿಧ ಜವಬ್ದಾರಿ ಹೊಂದಿರುವಂತಹ ರಮೇಶ್ ಕೆ,ಕೃಷ್ಣಪ್ಪ ಗೌಡ,ಉಮೇಶ್ ನಿಡ್ಯಾರ, ಪ್ರಶಾಂತ್, ಸುರೇಶ ಬಂಟ್ರಿಂಜಾ, ಹೇಮಂತ ತಾರಿಪಡ್ಪು ಹಾಗೂ ಹಲವಾರು ಕಾರ್ಯಕರ್ತ ಬಂಧುಗಳು ಭಾಗವಹಿಸಿದ್ದರು. ಕೊನೆಯಲ್ಲಿ ಚಾ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮವನ್ನು ನಾಗೇಶ್ ಭಂಡಾರಿ ಸ್ವಾಗತಿಸಿ, ಜಯರಾಮ್ ಆಚಾರ್ಯ ವಂದಿಸಿದರು.

driving
- Advertisement -

Related news

error: Content is protected !!