Friday, June 26, 2026
spot_imgspot_img
spot_imgspot_img

ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ: ಇಬ್ಬರು ದಂಧೆಕೋರರ ಬಂಧನ!

- Advertisement -
- Advertisement -

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಬೆನ್ನಲ್ಲೆ ಎಫ್ ಐಆರ್ ಸಹ ದಾಖಲಾಗಿದೆ. ಇಬ್ಬರು ಬೆಡ್ ಬ್ಲಾಕಿಂಗ್ ದಂಧೆಕೋರರನ್ನು ಬಂಧಿಸಲಾಗಿದೆ.

ಬೆಡ್ ಬ್ಲಾಕಿಂಗ್ ದಂಧೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೋಹಿತ್ ಮತ್ತು ನೇತ್ರಾ ಬಂಧಿತ ಬೆಡ್ ಬ್ಲಾಕಿಂಗ್ ದಂಧೆಕೋರರು. ರೋಹಿತ್ ಮತ್ತು ನೇತ್ರಾ,ಇಬ್ಬರು ಏಜೆಂಟರುಗಳ ರೀತಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿದ್ದರು.

ರೋಹಿತ್ & ನೇತ್ರಾರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಜೊತೆ ದಂಧೆಯಲ್ಲಿ ಭಾಗಿಯಾಗಿರೋರ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ.

ಮೂರು ಐಸಿಯು ಬೆಡ್ ಗಳನ್ನ ಮಾರಿದ್ದ ದಂಧೆ ಕೋರರು ಅರೆಸ್ಟ್ ಆಗಿದ್ದಾರೆ. ಇಬ್ಬರ ಅಕೌಂಟ್ ನಿಂದ (1,00,5000) ಒಂದು‌ ಲಕ್ಷದ ಐದು ಸಾವಿರ ರೂ ಪತ್ತೆಯಾಗಿದೆ. ಪೇಷೆಂಟ್ ಗಳಿಂದ ಐವತ್ತು ಸಾವಿರಕ್ಕೆ ಡಿಮ್ಯಾಂಡ್ ಇಟ್ಟು ಡೀಲ್ ಕುದುರಿಸುತ್ತಿದ್ದ ದಂಧೆ ಕೋರರು ಬಲೆಗೆ ಬಿದ್ದಿದ್ದಾರೆ.

- Advertisement -

Related news

error: Content is protected !!