Thursday, March 28, 2024
spot_imgspot_img
spot_imgspot_img

ಬೆಳ್ತಂಗಡಿ: ತುಳು ನಾಟಕ ನಿಲ್ಲಿಸಿ ಕಲಾವಿದರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೈದ ಆರೋಪ; ಶಾಸಕ ಹರೀಶ್ ಪೂಂಜರವರ ಏನೂ ತಪ್ಪಿಲ್ಲ – ಯುವ ಶೆಟ್ಟಿ

- Advertisement -G L Acharya panikkar
- Advertisement -

ನಾಟಕ ಅರ್ಧಕ್ಕೆ ನಿಲ್ಲಿಸಿ ಬಣ್ಣ ಹಚ್ಚಿದ ಕಲಾವಿದರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಬೆಳ್ತಂಗಡಿಯ ಅರಂಬೋಡಿ ಸರಕಾರಿ ಶಾಲೆಯ ವಾರ್ಷಿಕೋತ್ಸವದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಯುವ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಎರಡು ವೀಡಿಯೋ ಹರಿಬಿಟ್ಟಿದ್ದಾರೆ. ಮೊದಲಿಗೆ ವೀಡಿಯೋದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ಶಾಸಕ ಹರೀಶ್ ಪೂಂಜರವರ ಏನೂ ತಪ್ಪಿಲ್ಲ, ದಯವಿಟ್ಟು ಕಲಾವಿದನ ಮೇಲೆ ನಡೆದ ಹಲ್ಲೆಯನ್ನು ರಾಜಕೀಯಕ್ಕೆ ಬಳಸಬೇಡಿ. ಎಂದು ಹೇಳಿದ್ದಾರೆ.

WATCH VIDEO: https://www.facebook.com/vishu.b.shetty/videos/574884927303837

https://www.facebook.com/vishu.b.shetty/videos/662968185516553

ನಾಟಕ ಪ್ರದರ್ಶನದ ವೇಳೆ ಕಲಾವಿದನ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಿದ್ದಾರೆ. ಸಮಾರಂಭಕ್ಕೆ ಶಾಸಕ ಹರೀಶ್ ಪೂಂಜಾ ಆಗಮಿಸಿದ್ದು, ಈ ವೇಳೆ ಆಯೋಜಕರು ನಾಟಕವನ್ನು ತಡೆಯುವಂತೆ ಸೂಚಿಸಿದ್ದಾರೆ. ಆದರೆ, ಅರ್ಧದಲ್ಲಿ ನಿಲ್ಲಿಸಲು ಕಲಾವಿದರು ಒಪ್ಪದಿದ್ದಾಗ ಆಯೋಜಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

ಜನವರಿ 1 ರಂದು ರಾತ್ರಿ ಸುರತ್ಕಲ್ ನ ತುಳುವೆರೆ ತುಡರ್ ತಂಡದಿಂದ ನಾಟಕ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಸುಮಾರು ಎರಡು ಗಂಟೆಯ ವೇಳೆಗೆ ಶಾಸಕ ಹರೀಶ್ ಪೂಂಜಾ ಮತ್ತು ಅವರ ಹಿಂಬಾಲಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಾಟಕವನ್ನು ಸ್ಥಗಿತಗೊಳಿಸಿ ಶಾಸಕರಿಗೆ ವೇದಿಕೆಯ ಮೇಲೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಆದರೆ ನಾಟಕದ ಪ್ರಮುಖ ದೃಶ್ಯ ನಡೆಯುತ್ತಿದ್ದುದರಿಂದ ಕಲಾವಿದರು ಇದಕ್ಕೆ ನಿರಾಕರಿಸಿದರು. ಜನತೆಗೆ ರಸಭಂಗವಾಗುತ್ತದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು.

ತುಳು ನಾಟಕ ಕಲಾವಿದರ ಒಕ್ಕೂಟ ಖಂಡನೆ
ಆದರೆ ಇದಾವುದಕ್ಕೂ ಕಿವಿಗೊಡದೆ ವಿದ್ಯುತ್ ಕಡಿತಗೊಳಿಸಿ ಕಲಾವಿದರ ಮೇಲೆ ಕೈ ಮಾಡಿದರು. ಅಲ್ಲದೆ, ಮಹಿಳಾ ಕಲಾವಿದರು ಇರುವುದನ್ನೂ ಪರಿಗಣಿಸದೆ ಅವಾಚ್ಯ ಪದಗಳಿಂದ ನಿಂದಿಸಿದರು. ಘಟನೆಯ ಬಗ್ಗೆ ಬುಧವಾರದಂದು ಮಂಗಳೂರಿನಲ್ಲಿ ಸಭೆ ಸೇರಿದ ತುಳು ನಾಟಕ ಕಲಾವಿದರ ಒಕ್ಕೂಟ ಈ ಘಟನೆಯನ್ನು ಖಂಡಿಸಿದ್ದಲ್ಲದೆ ಸಂಬಂಧಿತರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

- Advertisement -

Related news

error: Content is protected !!