Sunday, April 28, 2024
spot_imgspot_img
spot_imgspot_img

ಭಾರತದ ಕೋವ್ಯಾಕ್ಸಿನ್ ತುರ್ತು ಬಳಕೆಗೆ WHO ಅನುಮೋದನೆ

- Advertisement -G L Acharya panikkar
- Advertisement -

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆ ​ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಮಾರಕ ಕೊರೋನಾ ವೈರಸ್​​ನಿಂದ ತಪ್ಪಿಸಿಕೊಳ್ಳಲು ಲಸಿಕೆ ಇಲ್ಲದ ದೇಶಗಳು ತುರ್ತಾಗಿ ಭಾರತದ ಕೋವ್ಯಾಕ್ಸಿನ್​​​ ಬಳಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇನ್ಮುಂದೆ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರು ಎಲ್ಲಾ ದೇಶಗಳಿಗೂ ಹೋಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಬಳಿಕ ಎಲ್ಲಾ ದೇಶಗಳು ಈಗ ಕೋವ್ಯಾಕ್ಸಿನ್​​ ಬಳಸಬಹುದು. ಕೊವಿಶೀಲ್ಡ್ ಜತೆ ಈಗ ಕೊವ್ಯಾಕ್ಸಿನ್ ಕೂಡ ವಿಶ್ವ ಅಧಿಕೃತ ಲಸಿಕೆಗಳ ಪಟ್ಟಿಗೆ ಸೇರಿದೆ.

ಆರಂಭದಿಂದಲೂ ಭಾರತದ ಕೋವ್ಯಾಕ್ಸಿನ್​​ಗೆ ಅನುಮೋದನೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ತಕರಾರು ಮಾಡುತ್ತಲೇ. ಕೋವ್ಯಾಕ್ಸಿನ್​​ ಸಂಬಂಧ ಹಲವು ಡೀಟೈಲ್ಸ್​ ನಮಗೆ ಸಿಕ್ಕಿಲ್ಲ ಎಂದು ಖ್ಯಾತೆ ತೆಗೆಯುತ್ತಿತ್ತು. ಭಾರತ ಯಾವಾಗ ಇತರ ದೇಶಗಳಿಗೆ ಲಸಿಕೆ ನೀಡೋದಿಲ್ಲ ಎಂದು ಕೆಲವು ಕ್ರಮಗಳನ್ನು ತೆಗೆದುಕೊಂಡಿತೋ ಅಂದು ಮೋದಿ ಸರ್ಕಾರದ ಒತ್ತಡಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಣಿದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊನೆಗೂ ಭಾರತ ಕೋವ್ಯಾಕ್ಸಿನ್​​ಗೆ ಅನುಮೋದನೆ ನೀಡಿದೆ. ಈ ಮುನ್ನ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಕೋವ್ಯಾಕ್ಸಿನ್​​ ಅನುಮೋದಿಸಿದ್ದವು.

- Advertisement -

Related news

error: Content is protected !!