Wednesday, July 1, 2026
spot_imgspot_img
spot_imgspot_img

ಮಂಗಳೂರು: ಅಕ್ರಮವಾಗಿ ಶೇಖರಿಸಿದ್ದ 15,000 ಲೀಟರ್ ಡೀಸಿಲ್; ಯಮುನಾ ಗ್ರೂಪ್ ನ ಮಾಲಕ ಪುರುಷೋತ್ತಮ ಶೆಟ್ಟಿ ವಿರುದ್ಧ ಪ್ರಕರಣ ದಾಖಲು..!

- Advertisement -
- Advertisement -

ಮಂಗಳೂರು: ಯಮುನಾ ಅರ್ಥ್ ಮೂವರ್ಸ್ ಮರೋಳಿ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ 15,000 ಲೀಟರ್ ಪೆಟ್ರೋಲಿಯಂ ಉತ್ಪನ್ನಗಳನ್ನು ಹಾಗು ಟ್ಯಾಂಕರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಯಮುನಾ ಹೋಮ್ಸ್ ಮತ್ತು ಡೆಲಿವರಿ ಸಂಸ್ಥೆಯ ಮಾಲಕ ಪುರುಷೋತ್ತಮ್ ಶೆಟ್ಟಿಯವರು ಬೋರ್ ವೆಲ್ ವ್ಯವಹಾರ ಹೊಂದಿದ್ದು, ಇವರು ತಮ್ಮ ಜಾಗದಲ್ಲಿ ಅಕ್ರಮವಾಗಿ ಡೀಸಿಲನ್ನು ಶೇಖರಿಸಿದ್ದರು. ಈ ಬಗ್ಗೆ ಯಾವುದೇ ಪರವಾನಿಗೆ ಹಾಗೂ ದಾಖಲೆಗಳು ಇಲ್ಲದೇ ಇರುವುದರಿಂದ ಕಂಕನಾಡಿ ನಗರ ಠಾಣೆಯಲ್ಲಿ ಮಾಲಕ ಪುರುಷೋತ್ತಮ ಶೆಟ್ಟಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಡೀಸೆಲ್ ನ ಒಟ್ಟು ಮೌಲ್ಯ 12.5 ಲಕ್ಷ ಆಗಿದೆ. ಅಕ್ರಮ ಡೀಸೆಲ್ ಪ್ರಕರಣ ಇದೀಗ ಜಿಲ್ಲೆಯೆಲ್ಲೇ ಅತೀ ದೊಡ್ಡ ಪ್ರಕರಣವಾಗಿದೆ.

ಮಂಗಳೂರು ಪೊಲೀಸರು ಈಗಾಗಲೇ ಈ ಜಾಲದ ಹಿಂದಿರುವ ನಂಟನ್ನು ಹಾಗೂ ಇದರ ಹಿಂದಿರುವ ಮಾಫಿಯಾವನ್ನು ಪತ್ತೆ ಹಚ್ಚಲು ಶತ ಪ್ರಯತ್ನ ಮಾಡುತ್ತಿದ್ದಾರೆ.

driving
- Advertisement -

Related news

error: Content is protected !!