Monday, August 10, 2026
spot_imgspot_img
spot_imgspot_img

ಮಂಗಳೂರು: ಅಕ್ರಮ ಗಾಂಜಾ ಮಾರಾಟ ಪತ್ತೆ; ರಿಕ್ಷಾ ಸಹಿತ ಓರ್ವನ ಬಂಧನ

- Advertisement -
- Advertisement -

ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಿಕ್ಷಾ ಸಹಿತ ಬಂಧಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಅಬ್ದುಲ್ ಹಕೀಂ(45) ಎಂದು ಗುರುತಿಸಲಾಗಿದೆ.

ಆರೋಪಿಯಿಂದ 40,300ರೂ. ಮೌಲ್ಯದ 4 ಕೆ.ಜಿ 150 ಗ್ರಾಂ ಗಾಂಜಾ ಹಾಗೂ 120000 ಮೌಲ್ಯದ 20 ಗ್ರಾಂ MDMA ಮತ್ತು 125000ರೂ. ಮೌಲ್ಯದ ಆಟೋರಿಕ್ಷಾ, 13,000 ಮೌಲ್ಯದ 2 ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು,ವಶಕ್ಕೆ ಪಡೆದುಕೊಂಡ ಸೊತ್ತುಗಳ ಒಟ್ಟೂ ಮೌಲ್ಯ 2,98,300ರೂ. ಎಂದು ಅಂದಾಜಿಸಲಾಗಿದೆ.

ಇನ್ನು ಆರೋಪಿ ಅಬ್ದುಲ್ ಹಕೀಂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈತನ ವಿರುದ್ದ ಈಗಾಗಲೇ 20 ಪ್ರಕರಣಗಳು ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!