Friday, June 5, 2026
spot_imgspot_img
spot_imgspot_img

ಮಂಗಳೂರು: ಆಡಿನ ಮರಿಯನ್ನು ರಕ್ಷಿಸಲು ಹೋಗಿ ಕಾಲು ಕಳೆದುಕೊಂಡ ಯುವಕ

- Advertisement -
- Advertisement -

ಮಂಗಳೂರು: ಆಡಿನ ಮರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೋರ್ವರು ತನ್ನ ಕಾಲುಗಳನ್ನು ಕಳೆದುಕೊಂಡ ಘಟನೆ ಜೋಕಟ್ಟೆ ಎಂಬಲ್ಲಿ ನಡೆದಿದೆ.

ಚೇತನ್ ಕುಮಾರ್ ಎಂಬವರು ಕಾಲು ಕಳೆದುಕೊಂಡ ನತದೃಷ್ಟ ಯುವಕ. ಆಡಿನ ಮರಿಯೊಂದು ರೈಲು ಹಳಿಯ ಉದ್ದಕ್ಕೂ ಓಡಾಡಿಕೊಂಡಿದ್ದು, ರೈಲು ಬರುವುದನ್ನು ಗಮನಿಸಿದ ಚೇತನ್ ಆಡುಮರಿಯ ರಕ್ಷಣೆಗೆ ಮುಂದಾಗಿದ್ದರು. ಮರಿಯನ್ನು ರಕ್ಷಿಸಿ ಚೇತನ್ ಹಳಿಯಿಂದ ಹೊರಬರುವ ಮೊದಲೆ ಧಾವಿಸಿದ ರೈಲು ಚೇತನ್ ಕಾಲಿನ ಮೇಲಿಂದಲೇ ಹರಿದಿದೆ.

ಗಂಭೀರ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಕಾಲು ಉಳಿಸಬಹುದು ಎಂದು ವೈದ್ಯರ ಭರವಸೆ ನೀಡಿದ್ದು, ಕುಟುಂಬದ ಆಧಾರವಾಗಿದ್ದ ಚೇತನ್ ನ ಕುಟುಂಬಕ್ಕೆ ಸದ್ಯ ದಿಕ್ಕು ತೋಚದಂತಾಗಿದೆ.

driving

- Advertisement -

Related news

error: Content is protected !!