- Advertisement -
- Advertisement -


ಮಂಗಳೂರು: ಕಾರಿನ ಶೋರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂನ ಆವರಣ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಘಟನೆ ನ.24 ರಂದು ನಡೆದಿದೆ. ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂನ ಆವರಣಕ್ಕೆ ಹೆದ್ದಾರಿ ದಾಟಿ ಮುಖ್ಯದ್ವಾರದಲ್ಲೇ ಓಡಿಬಂದ ಕಾಡುಹಂದಿ , ಅಲ್ಲೇ ಆವರಣದಲ್ಲಿದ್ದ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನಿಸಿದೆ. ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿ ಹೋಗಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.





- Advertisement -








