Monday, May 6, 2024
spot_imgspot_img
spot_imgspot_img

ಮಂಗಳೂರು: ಕೇರಳದ ರಿಜಿಸ್ಟರ್ ಕೇಂದ್ರಗಳಲ್ಲಿ ಹಿಂದು-ಮುಸ್ಲಿಂ ನಡುವೆ ಮ್ಯಾರೇಜ್..! ಐಟಿ ಬಿಟಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನದ ಆಮಿಷವೊಡ್ಡಿ ಮತಾಂತರ

- Advertisement -G L Acharya panikkar
- Advertisement -

ಮಂಗಳೂರು: ರಾಜ್ಯದಲ್ಲಿ ಕಠಿಣ ಮತಾಂತರ ನಿಷೇಧ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕು ಎಂದು ಕರಾವಳಿಯ ಪ್ರಮುಖ ಸ್ವಾಮೀಜಿಗಳು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಸೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿ ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋನದಾಸ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಮುಖಂಡ ರಾಜ ಎಂ.ಬಿ. ಪುರಾಣಿಕ್, ಶರಣ್ ಪಂಪ್ವೆಲ್, ಗೋಪಾಲ ಕುತ್ತಾರ್ ಸೇರಿದಂತೆ ಹಲವರು ಇದ್ದರು. ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಬೇಕು ಮತ್ತು ಶೀಘ್ರದಲ್ಲೇ ಅಧ್ಯಾದೇಶ ಹೊರಡಿಸಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ. ಜಿಲ್ಲಾಧಿಕಾರಿ ಭೇಟಿ ಬಳಿಕ ಕದ್ರಿಯಲ್ಲಿರುವ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸ್ವಾಮೀಜಿಗಳು ಸುದ್ದಿಗೋಷ್ಠಿ ಕರೆದು ಮಾತನಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಒಡಿಯೂರು ಮಠದ ಸ್ವಾಮೀಜಿ, ಮತಾಂತರ ಅನ್ನೋದು ಕಾಯಿಲೆ, ಮಹಾಮಾರಿ ಇದ್ದಂತೆ. ದೇಶದ ಎಲ್ಲೆಂದರಲ್ಲಿ ಬಡವ, ಬಲ್ಲಿದ ಅನ್ನುವ ಭೇದ ಇಲ್ಲದೆ ಹರಡುತ್ತಿದೆ. ಬಡವರನ್ನು ಆಮಿಷಕ್ಕೊಡ್ಡಿ ಮತಾಂತರಿಸಲಾಗುತ್ತಿದೆ, ಐಟಿ ಬಿಟಿ ಕಂಪನಿಗಳಲ್ಲಿ ಉನ್ನತ ಸ್ಥಾನದ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿದೆ. ವಿದ್ಯಾವಂತರನ್ನು ಈ ರೀತಿ ಮತಾಂತರಿಸಿ, ಆನಂತರ ಮನೆಯವರನ್ನೂ ಮತಾಂತರಕ್ಕೆ ಬಲಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಲವ್ ಜಿಹಾದ್ ಒಂದೆಡೆಯಾದರೆ, ಮತ್ತೊಂದು ಕಡೆ ಬಲವಂತದ ಮತಾಂತರ ನಡೆಸಲಾಗುತ್ತಿದೆ. ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುತ್ತಾನೋ, ಅದೇ ಧರ್ಮದಲ್ಲಿ ಸಾಯುವುದು ಆತನ ಹಕ್ಕು. ಯಾಕಾಗಿ ಅವರನ್ನು ಮತಾಂತರ ಮಾಡಬೇಕು. ದಶಕಗಳಿಂದ ಹಿಂದುಗಳು ಮಾತ್ರ ಇವರ ಟರ‍್ಗೆಟ್ ಆಗಿದ್ದಾರೆ. ಇದರ ವಿರುದ್ಧ ಪ್ರಬಲ ಕಾನೂನು ತರಬೇಕಿದೆ ಎಂದು ವಿಹಿಂಪ ಪ್ರಾಂತ ಕರ‍್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.

ಸೆಕ್ಯುಲರಿಸಂ ಅನ್ನುವುದು ಹಿಂದುತ್ವದ ಗಿಫ್ಟ್. ಎಲ್ಲ ಮತಗಳನ್ನು ಸಮಾನವಾಗಿ ನೋಡು ಎನ್ನುವುದು ಹಿಂದುತ್ವದ ಕಲ್ಪನೆ. ಅದೇ ತತ್ವ ಸೆಕ್ಯುಲರಿಸಂ. ಆದರೆ, ಸೆಕ್ಯುಲರ್ ಆಗಿರುವ ಹಿಂ ದುಗಳೇ ಈಗ ಟರ‍್ಗೆಟ್ ಆಗಿದ್ದಾರೆ. ಕೇರಳದಲ್ಲಿ ಕೆಲವೊಂದು ರಿಜಿಸ್ಟರ್ ಕೇಂದ್ರಗಳಲ್ಲಿ 80 ಶೇಕಡಾ ಮ್ಯಾರೇಜ್ ರಿಜಿಸ್ಟರ್ ಆಗುವುದು ಹಿಂದು-ಮುಸ್ಲಿಂ ನಡುವೆ. ಈ ಬಗ್ಗೆ ಖಚಿತ ದಾಖಲೆಗಳಿದ್ದು, ಹಿಂದು ಹೆಣ್ಮಕ್ಕಳನ್ನೇ ಟರ‍್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಧರ‍್ಮಿಕ ಕೇಂದ್ರಗಳು ನಡೆಸುವ ಶಿಕ್ಷಣ ಕೇಂದ್ರಗಳಲ್ಲೂ ಮತಾಂತರ ಕರ‍್ಯನಡೆಯುತ್ತಿದೆ ಎಂ ದು ಕಾಸರಗೋಡಿನ ವಿದ್ಯಾನಂದ ಸರಸ್ವತಿ ಹೇಳಿದ್ದಾರೆ.

ಇದೇ ವಿಚಾರದ ಬಗ್ಗೆ ವಿವರಣೆ ನೀಡಿದ ಗುರುಪುರ ಶ್ರೀ, ಐಟಿ ಬಿಟಿ ಕೇಂದ್ರಗಳಲ್ಲಿ ಮತಾಂತರ ಹೇಗಿದೆ ಅಂದ್ರೆ, ಅಲ್ಲಿನ ಚಟುವಟಿಕೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ. ಬೆಂಗಳೂರು ಸೇರಿ ನಗರಗಳಲ್ಲಿ ಇಂಥ ಚಟುವಟಿಕೆಗಳಾಗುತ್ತಿವೆ. ಹಲವು ಆಮಿಷವೊಡ್ಡಿ ಮತಾಂತರಿಸುವ ಕೆಲಸ ಆಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಅದನ್ನು ನಾವು ಪ್ರತಿಭಟನೆ ಇನ್ನೊಂದು ರೂಪದಲ್ಲಿ ನಿಯಂತ್ರಣಕ್ಕೆ ತರುವುದು ಸಾಧ್ಯವಿಲ್ಲ. ಅದಕ್ಕಾಗಿ ಕಠಿಣ ಕಾಯ್ದೆಯುಳ್ಳ ಕಾನೂನುಗಳೇ ಜಾರಿಗೆ ಬರಬೇಕು. ಕಾನೂನು ತರುವ ಬಗ್ಗೆ ಸರಕಾರ ಹೇಳಿದೆ. ಅದನ್ನು ಅಧ್ಯಾದೇಶ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

- Advertisement -

Related news

error: Content is protected !!