Friday, April 26, 2024
spot_imgspot_img
spot_imgspot_img

ಮಂಗಳೂರು: ತಣ್ಣೀರುಬಾವಿ ಕಡಲತೀರದಲ್ಲಿ ಅಪಾಯದಲ್ಲಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ ಸರ್ಫರ್’ಗಳು

- Advertisement -G L Acharya panikkar
- Advertisement -

ಮಂಗಳೂರು: ತಣ್ಣೀರುಬಾವಿ ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂಡುಬಿದಿರೆಯ ಕಾಲೇಜೊಂದರ ಐವರು ವಿದ್ಯಾರ್ಥಿಗಳನ್ನು ಸಮೀಪದಲ್ಲೇ ತರಬೇತಿ ನೀಡುತ್ತಿದ್ದ ಸರ್ಫಿಂಗ್ ತರಬೇತುದಾರರಾದ ತೇಜಸ್ ನಾಯಕ್ ಮತ್ತು ಸಹಚರರು ರಕ್ಷಿಸಿದ ಘಟನೆ ನಡೆದಿದೆ.

ಏಪ್ರಿಲ್ 24ರ ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ತಣ್ಣೀರುಬಾವಿ ಬೀಚ್‌ನ ಫಾತಿಮಾ ಚರ್ಚ್ ಬಳಿ ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜುತ್ತಿದ್ದರು. ಅಲೆಗಳು ತುಂಬಾ ಎತ್ತರದಲ್ಲಿದ್ದ ಕಾರಣ, ಅವರು ದಡದ ಕಡೆಗೆ ಈಜಲು ಸಾಧ್ಯವಾಗಲಿಲ್ಲ. ಕೂಡಲೇ ರಾಷ್ಟ್ರೀಯ ಈಜುಪಟುಗಳಾದ ಸಂಕೇತ್ ಬೆಂಗ್ರೆ ಮತ್ತು ಶಿಲ್ಪಾ ಬೆಂಗ್ರೆ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದರು.

ಆದರೆ, ಉಳಿದ ಮೂವರು ಅಪಾಯದಲ್ಲಿದ್ದರು. ಅವರು ಸಹಾಯಕ್ಕಾಗಿ ಕಿರುಚಿದಾಗ ತೇಜಸ್ ಮತ್ತು ಇತರ ಸರ್ಫರ್‌ಗಳು ತಮ್ಮ ಸರ್ಫ್ ಬೋರ್ಡ್‌ನಲ್ಲಿ ಅವರನ್ನು ದಡಕ್ಕೆ ಕರೆತಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ತೇಜಸ್ ಲೈಫ್ ಗಾರ್ಡ್ ಆಗಿಯೂ ತರಬೇತಿ ಪಡೆದಿದ್ದಾರೆ. ತೇಜಸ್ ಮತ್ತು ಇತರರ ಪ್ರಯತ್ನವನ್ನು ಸಮುದ್ರತೀರದಲ್ಲಿ ನೆರೆದಿದ್ದವರೆಲ್ಲ ಶ್ಲಾಘಿಸಿದ್ದಾರೆ.

- Advertisement -

Related news

error: Content is protected !!