Friday, April 19, 2024
spot_imgspot_img
spot_imgspot_img

ಮಂಗಳೂರು: ನಿಧಿಯ ಆಸೆಗೆ ನಾಗನ ಹುತ್ತಕ್ಕೆ ಕನ್ನ ಕೊರೆದ ಚೋರರು..!

- Advertisement -G L Acharya panikkar
- Advertisement -

ಮಂಗಳೂರು: ನಿಧಿ ಆಸೆಯಿಂದ ಕಳ್ಳರು ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಕೋಣಾಜೆ ಬಳಿಯ ಇರಾದಲ್ಲಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬAಧಪಟ್ಟ ಬಪ್ಪರ ಕಂಬಳದ ನಾಗಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಯ ಆಸೆಯಿಂದ ಭೂಮಿಯನ್ನು ಸುಮಾರು ಹತ್ತು ಅಡಿ ಅಗೆದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ನಿಧಿ ಇದೆ ಎಂಬುವ ಮಾತು ಎಲ್ಲೇಡೆ ಹರಡಿತ್ತು, ಅದು ಜನರಿಂದ ಜನರಿಗೆ ಹರಡಿ ದುರಾಸೆಯಿಂದ ಕಳ್ಳರು ನಿಧಿ ಶೋಧ ನಡೆಸಿದ್ದಾರೆ ಎಂದು ಊಹಿಸಲಾಗಿದೆ. ಈ ಬಗ್ಗೆ ದೇವಸ್ಥಾನ ಸಮಿತಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ದೇವಸ್ಥಾನಕ್ಕೆ ಸಂಬ0ಧಪಟ್ಟ ನಾಗಬನಕ್ಕೆ ನಾಗನಕಟ್ಟೆಯನ್ನು ಕಟ್ಟಲಾಗಿದ್ದು, ಕಳ್ಳರು ನಾಗನಕಟ್ಟೆಗೆ ಯಾವುದೇ ಹಾನಿಯನ್ನುಂಟು ಮಾಡದೆ, ಹುತ್ತವನ್ನು ಅಗೆದಿರುವುದು ನಿಧಿ ಶೋಧಕ್ಕೆ ಎನ್ನುವ ಸಂಶಯ ಬಂದಿದೆ. ಇವೆಲ್ಲದರ ಜೊತೆಯಲ್ಲಿ ಇರಾ ಸಾಮರಸ್ಯದ ಗ್ರಾಮವಾಗಿದ್ದು ಈ ಘಟನೆಯನ್ನು ಯಾವುದೇ ಕಾರಣಕ್ಕೂ ಕೋಮು ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಮುಂದುವರಿಸ ಬೇಕೆ0ದು ಕ್ಷೇತ್ರದ ಸಮಿತಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!