Tuesday, May 7, 2024
spot_imgspot_img
spot_imgspot_img

ಮಂಗಳೂರು: ನ್ಯಾಷನಲ್ ಕನ್ಸ್ಯೂಮರ್ ಫೇರ್ ನಿಂದ ರಾಷ್ಟ್ರೀಯ ಗ್ರಾಹಕರ ಮೇಳ

- Advertisement -G L Acharya panikkar
- Advertisement -

ಮಂಗಳೂರು: ಜಿಲ್ಲೆಯ ಜನತೆಯ ಬಹು ನಿರೀಕ್ಷಿತ ರಾಷ್ಟ್ರೀಯ ಗ್ರಾಹಕರ ಮೇಳ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಏಪ್ರಿಲ್ ಮತ್ತು ಮೇ.ತಿಂಗಳುನಲ್ಲಿ ಪ್ರತಿ ದಿನ ಸಂಜೆ 4 ರಿಂದ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೀಯ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವ ತಾರೆಯಾಗಿ ಗುರುತಿಸಿಕೊಂಡಿರುವ ನ್ಯಾಷನಲ್ consumer ಫೇರ್ ನಿಂದ ಸಂಘಟಿಸಲ್ಪಡುತ್ತಿದೆ.

ಮಂಗಳೂರಿಗೆ ವಿನೂತನ ರೀತಿಯ ಮೆಗಾ ಶೋ ಗಳನ್ನು ನೀಡಿರುವ ಈ ಸಂಸ್ಥೆ ಪ್ರತೀ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಿದ್ದು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನೋರಂಜನ ಮೇಳವಾಗಿರುತ್ತದೆ. ರಾಷ್ಟ್ರೀಯ ಗ್ರಾಹಕರ ಮೇಳದ ವಿಶೇಷ ಆಕರ್ಷಣೆಯಾಗಿ ಭವ್ಯ ಲಂಡನ್ ಬ್ರಿಡ್ಜ್ ನ ಪ್ರತಿಕೃತಿ ಲಭ್ಯವಿದ್ದು ಯುವಜನರ ಮಕ್ಕಳ ವಿಶೇಷ ಆಕರ್ಷಣೆಯಾಗಲಿದೆ.

ಮಂಗಳೂರಿನಲ್ಲಿ ಸಂಘಟಿಸಲಾಗುತ್ತಿರುವ ಯಶಸ್ವಿ ರಾಷ್ಟ್ರೀಯ ಗ್ರಾಹಕರ ಮೇಳವು ಭಾರತದಲ್ಲಿಯೇ ಅತೀ ದೊಡ್ಡ ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮನೋರಂಜನ ಮೇಳ ಎಂದು ಗುರುತಿಸಲಾಗಿದೆ. ಮೇಳವು ಹಲವು ಮಳಿಗೆಗಳೊಂದಿಗೆ ವಿಶೇಷ ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಆಟೋ ಮೊಬೈಲ್, ಅಡುಗೆ ಮನೆ ಉತ್ಪನ್ನಗಳು, ಕೈ ಮಗ್ಗದ ಉತ್ಪನ್ನಗಳು, ಡ್ರೆಸ್ ಮೆಟಿರಿಯಲ್ಸ್, ಫ್ಯಾಷನ್ ಪಾದರಕ್ಷಗಳು, ಆರೋಗ್ಯ ಆಟಿಕೆಗಳು, ಆಹಾರೋತ್ಪನ್ನಗಳು ಇನ್ನು ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿದೆ.

ಮೇಳದ ಅಂಗವಾಗಿ ರೋಬೋಟ್ ಯಂತ್ರಗಳಿಂದ ನಿರ್ಮಿಸಲಾದ ವನ್ಯ ಮೃಗಗಳ ಮೃಗಾಲಯವನ್ನು ನಿರ್ಮಿಸಲಾಗಿದೆ. ಆಫ್ರಿಕಾದ ದಟ್ಟ ಕಾಡಿನ ಆನೆಗಳಿಂದ ಹಿಡಿದು ಚೈನೀಸ್ ಪಾಂಡ ಅಸ್ಸಾಂ ನ ಖಡ್ಗಮೃಗ, ಅಟ್ಲಾಂಟಿಕ್ ಸಾಗರದ ಶಾರ್ಕ್, ಬಂಗಾಲದ ಬಿಳಿ ಹುಲಿ, ನೀರಾನೆ, ಕಿಂಗ್ಕಾಂಗ್, ಗುಜರಾತಿನ ಸಿಂಹ, ಕೆಂಪು ಸಮುದ್ರದ ಡಾಲ್ಫಿನ್, ಕರಡಿ, ಹಾವು ಮೊಸಳೆ, ಪಶ್ಚಿಮ ಬಂಗಾಳದ ಆನೆಗಳ ಪರಿವಾರ ಈ ಪ್ರದರ್ಶನದ ಮುಖ್ಯ ಆಕರ್ಷಣೆ.

ಮನೋರಂಜನೆ ವಿಭಾಗದಲ್ಲಿ ಮೆರ್ರಿ, ಕೊಲಂಬಸ್, ಡ್ಯಾಶಿಂಗ್ ಕಾರ್, ಟೋರ್ರ ಟೋರ್ರ, ಮಿನಿ ಟ್ರೈನ್, ಹಾಗೂ ಮಂಗಳೂರಿನಲ್ಲಿ ವಿನೂತನ ಮಾದರಿಯ ಅಮ್ಯೂಸ್ ಮೆಂಟ್ ಗಳಾದ ಸ್ಪೇಸ್ ಜೆಟ್ (ಸ್ವಯಂ ನಿಯಂತ್ರಣ ವಿಮಾನ ), ಮಿನಿ ಶಟ್ಲ್ ಇವೆಲ್ಲವೂ ಗ್ರಾಹಕರ ಮನ ತಣಿಸಲಿದೆ.

- Advertisement -

Related news

error: Content is protected !!