Sunday, June 21, 2026
spot_imgspot_img
spot_imgspot_img

ಮಂಗಳೂರು: ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

- Advertisement -
- Advertisement -
vtv vitla

ಮಂಗಳೂರು: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸೋಮವಾರ ಮಧ್ಯಾಹ್ನ ಮಂಗಳೂರು ಪೊಲೀಸ್ ಆಯುಕ್ತರ ಕೋರಿಕೆಯಂತೆ ಆಯುಕ್ತರ ಕಚೇರಿಗೆ ಆಗಮಿಸಿದರು.

ಪೊಲೀಸ್ ಅಧಿಕಾರಿ, ಸಿಬಂದಿಗಳು ರೂಪೇಶ್ ಅವರಿಗೆ ಶುಭಾಶಯ ಕೋರಿದರು. ರೂಪೇಶ್‌ ತುಳುವಿನಲ್ಲಿ ಮಾತನಾಡಿದವರೊಂದಿಗೆ ತುಳುವಿನಲ್ಲೇ ಪ್ರತಿಕ್ರಿಯಿಸಿದರು.

ರೂಪೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನಾವು ಆಹ್ವಾನಿಸಿದ ಕೂಡಲೇ ರೂಪೇಶ್ ಒಪ್ಪಿಕೊಂಡು ಬಂದಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯ ಮೇಲೆ ಇರುವ ಅಭಿಮಾನವನ್ನು ಇದು ತೋರಿಸುತ್ತದೆ. ರೂಪೇಶ್ ಇನ್ನಷ್ಟು ಸಾಧನೆ ಮಾಡಿ ಕನ್ನಡ ತುಳು ಭಾಷೆಯ ಕಂಪನ್ನು ಜಗತ್ತಿನಾದ್ಯಂತ ಪಸರಿಸಲಿ ಎಂದರು.

- Advertisement -

Related news

error: Content is protected !!