Tuesday, June 9, 2026
spot_imgspot_img
spot_imgspot_img

ಮಂಗಳೂರು: ಯು ಟರ್ನ್‌ ಹೊಡೆದ ಆಟೋ- ಹೆಲ್ಮೆಟ್‌ ರಹಿತ ಪ್ರಯಾಣ; ಅಪಘಾತದಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

- Advertisement -
- Advertisement -
vtv vitla

ಮಂಗಳೂರು: ಆಟೋ ಚಾಲಕನ ನಿರ್ಲಕ್ಷ್ಯದ ಚಾಲನೆ ಹಾಗೂ ಹೆಲ್ಮೆಟ್ ರಹಿತ ಪ್ರಯಾಣದಿಂದ ಯುವಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ನಗರದ ಬಿಜೈನಲ್ಲಿ ನಡೆದಿದೆ.

ಮೃತರನ್ನು ಬಿಜೈ ನಿವಾಸಿ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿ ಕವನ್ ಆಳ್ವ(20) ಎಂದು ಗುರುತಿಸಲಾಗಿದೆ.

ಬಿಜೈ ಚರ್ಚ್ ಹಾಲ್ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದೆ. ಆಟೋ ಚಾಲಕ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಿಂದಲೇ ಆಟೋವನ್ನು ಯು ಟರ್ನ್ ತಿರುವು ತೆಗೆದುಕೊಂಡಿದ್ದ. ಮುಂದಿನಿಂದ ಬರುತ್ತಿದ್ದ ಬೈಕ್ ಸವಾರ ಆಯತಪ್ಪಿ ರಿಕ್ಷಾಗೆ ಡಿಕ್ಕಿಯಾಗಿದ್ದು ರಸ್ತೆ ಬದಿಯ ಮರಕ್ಕೆ ಹೋಗಿ ಬಡಿದಿದ್ದಾನೆ. ತಲೆಯ ಭಾಗ ನೇರವಾಗಿ ಮರಕ್ಕೆ ಬಡಿದಿದ್ದರಿಂದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಬಿಜೈ ನಿವಾಸಿಯಾಗಿದ್ದು ನಗರದ ಎಸ್.ಡಿ.ಎಂ ಕಾಲೇಜಿನಲ್ಲಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಕವನ್ ಆಳ್ವ(20) ಮೃತ ಯುವಕ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ ಪರಿಣಾಮ ಯುವಕ ಸಾವು ಕಂಡಿದ್ದಾನೆ. ಕದ್ರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!