Tuesday, June 9, 2026
spot_imgspot_img
spot_imgspot_img

ಮಂಗಳೂರು: ಶೂಟೌಟ್ ಪ್ರಕರಣ; ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ಅರೆಸ್ಟ್!

- Advertisement -
- Advertisement -
driving

ಮಂಗಳೂರು: ನಗರದ ಮೋರ್ಗನ್ ಗೇಟ್ ಬಳಿ ನಡೆದ ಶೂಟೌಟ್ ಪ್ರಕರಣದಲ್ಲಿ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಕಡಲನಗರಿಯಲ್ಲಿ ಹಾಡಹಗಲೇ ಶೂಟೌಟ್; ಕೆಲಸದಾಳಿಗೆ ಹಾರಿಸಿದ ಗುಂಡು ತನ್ನ ಮಗನ ಜೀವಕ್ಕೆ ಕುತ್ತು

ಆರೋಪಿ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದು, ಆದರೆ, ರಾಜೇಶ್ ಪ್ರಭು ಹೃದಯಾಘಾತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸ್ ವಶದಲ್ಲಿದ್ದುಕೊಂಡೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕೋಪಕ್ಕೆ ಕೊಯ್ದ ಮೂಗು ಮತ್ತೇ ಬಂದೀತೇ..! ತಂದೆ ಹಾರಿಸಿದ ಗುಂಡು ಮಗನನ್ನೇ ಬಲಿಪಡೆಯಿತು; ಅಂಗಾಂಗ ದಾನಕ್ಕೆ ನಿರ್ಧಾರ

ಎರಡು ದಿನಗಳ ಹಿಂದೆ ಮೋರ್ಗನ್ ಗೇಟ್ ನಲ್ಲಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಕಚೇರಿಯಲ್ಲಿ ಸಂಬಳದ ವಿಚಾರದಲ್ಲಿ ತಕರಾರು ನಡೆಸಿದ್ದ ಇಬ್ಬರು ಕೆಲಸದಾಳುಗಳ ಮೇಲಿನ ಕೋಪದಲ್ಲಿ ರಾಜೇಶ್ ಪ್ರಭು ತನ್ನಲ್ಲಿದ್ದ ಪಿಸ್ತೂ ಲ್ ತೆಗೆದು ಶೂಟ್ ಮಾಡಿದ್ದು ಈ ವೇಳೆ ಗುಂಡು ತಪ್ಪಾಗಿ ರಾಜೇಶ್ ಪ್ರಭು ಮಗ ಸುಧೀಂದ್ರ ನ ಮೇ ಲೆ ಬಿದ್ದಿತ್ತು .

ತೀವ್ರ ಗಾಯಗೊಂಡಿದ್ದ ಸುಧೀಂದ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧೀಂದ್ರ ಪ್ರಭು ತಲೆಗೆ ಗುಂಡೇಟು ಬಿದ್ದಿದ್ದರಿಂದ ಮೆದುಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದ್ದು , ಮೆದುಳು ನಿಷ್ಕ್ರಿಯ ಆಗಿದೆಯೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಕುಟುಂಬಸ್ಥರು ಅಧಿಕೃತವಾಗಿ ದೃಢಪಡಿಸಿಲ್ಲ. ಮಗನಿಗೆ ಗುಂಡೇಟು ಬಿದ್ದಆಘಾತದಲ್ಲಿ ತಂದೆ ರಾಜೇಶ್ ಪ್ರಭುವಿಗೆ ಹೃದಯಾಘಾತ ಆಗಿದೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!