Sunday, June 14, 2026
spot_imgspot_img
spot_imgspot_img

ಮಂಗಳೂರು: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಸುರತ್ಕಲ್‌ನ ಯುವಕ ಮೃತ್ಯು

- Advertisement -
- Advertisement -
vtv vitla

ಸೌದಿ ಅರೇಬಿಯಾ: ಕಾರು ಮತ್ತು ಲಾರಿ‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಸುರತ್ಕಲ್‌ ನಿವಾಸಿ ಯುವಕ ಮೃತಪಟ್ಟ ಘಟನೆ ನಡೆದಿದೆ.

ತಡಂಬೈಲ್‌ ಫಾತಿಮಾ‌ ಸೂಪರ್‌‌ ಮಾರ್ಕೆಟ್ ನ ಅಬ್ದುಲ್ ಖಾದರ್ ಹಾಗೂ ಬೀ ಫಾತಿಮಾ ಎಂಬವರ‌ ಪುತ್ರ ಫಾಝಿಲ್ (29) ಮೃತಪಟ್ಟ ಯುವಕ.

ಸೌದಿ ಅರೆಬಿಯಾದ ಅಲ್ ಅಸ ಎಂಬಲ್ಲಿ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಫಾಝಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಫಾಝಿಲ್ ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಸಣ್ಣ ಮಗು ಇದ್ದು, ಫಾಝಿಲ್ ತನ್ನ ಪತ್ನಿ ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದರು ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!