Saturday, June 20, 2026
spot_imgspot_img
spot_imgspot_img

ಮಡಿಕೇರಿ: ಕಾಲುಜಾರಿ ಬಿದ್ದು ಎನ್ ಸಿ ಸಿ ಅಧಿಕಾರಿ ಸಾವು

- Advertisement -
- Advertisement -
vtv vitla

ಮಡಿಕೇರಿ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಎನ್ ಸಿ ಸಿ ಅಧಿಕಾರಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ವಿರಾಜಪೇಟೆಯ ಬಲ್ಕಂಡ ಡಾ. ಎಸ್.ಎನ್ ಬೀನಾ (52) ಮೃತ ದುರ್ದೈವಿ. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಎನ್ ಸಿಸಿ ಅಧಿಕಾರಿಯಾಗಿದ್ದ ಡಾ. ಎಸ್.ಎನ್ ಬೀನಾ, ಈ ಹಿಂದೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವಿರಾಜಪೇಟೆಯ ಕಡಂಗದ ಮರೂರು ಗ್ರಾಮದ ನಿವಾಸಿ ಡಾ.ಎಸ್.ಎನ್.ಬೀನಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ. ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೀನಾ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!