Friday, April 19, 2024
spot_imgspot_img
spot_imgspot_img

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 60 ಕೆಜಿ ತೂಕದ ಮಡಲು ಮೀನು..!

- Advertisement -G L Acharya panikkar
- Advertisement -
suvarna gold

ಮಲ್ಪೆ: ಮೀನುಗಾರಿಕಾ ಬೋಟ್ ಗೆ 60 ಕೆಜಿ ತೂಕದ ಮಡಲು ಮೀನು ಬಿದಿದ್ದು, ಮೀನು ನೋಡಲು ಜನ ಮಲ್ಪೆ ಬಂದರಿನಲ್ಲಿ ಜಮಾಯಿಸಿದ್ದಾರೆ.

ಅತೀ ವೇಗವಾಗಿ ಚಲಿಸುವ ಈ ಮೀನು ಸುಮಾರು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಇದು ಬಂಗುಡೆ, ಬೂತಾಯಿ, ಅಕ್ಟೋಪಸ್‌ ಇನ್ನಿತರ ಮೀನುಗಳನ್ನು ತಿನ್ನುತ್ತದೆ.

ಮಲ್ಪೆಯ ಸನ್ಮಯ ಬೋಟಿನ ಬಲೆಗೆ ಈ ಮೀನನ್ನು ಬಿದ್ದಿದ್ದು,ಸುಮಾರು ಕೆ.ಜಿ.ಗೆ 120 ರೂಪಾಯಿಯಂತೆ ಮಾರಾಟವಾಗಿದೆ, ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಬಂದಿದ್ದರೂ ಈ ಮೀನು 60 ಕೆ.ಜಿ. ಇರುವುದು ಬಲು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್‌ ಹೇಳಿದ್ದಾರೆ. ವೈಜ್ಞಾನಿಕವಾಗಿ ಸೈಲ್‌ ಮೀನು ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ಮಡಲಿನ ಆಕೃತಿ ಇರುವುದರಿಂದ ಮಡಲು ಮೀನು ಎಂದು ಕರೆಯುತ್ತಾರೆ.

- Advertisement -

Related news

error: Content is protected !!