Friday, April 26, 2024
spot_imgspot_img
spot_imgspot_img

ಮಾನಸಿಕ ಅಸ್ವಸ್ಥನನ್ನು ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಫ್ರೆಂಡ್ಸ್ ವಿಟ್ಲ ತಂಡ; ವೃದ್ಧರ, ಅನಾಥರ ಬಾಳಿಗೆ ಬೆಳಕಾಗುವ ದೈಗೋಳಿಯ ಶ್ರೀ ಸಾಯಿನಿಕೇತನ ಸೇವಾಶ್ರಮ

- Advertisement -G L Acharya panikkar
- Advertisement -
vtv vitla

ಹುಟ್ಟುವಾಗ ಯಾವನೂ ಕೆಟ್ಟವನೂ ಅಲ್ಲ…ಕಳ್ಳನೂ ಅಲ್ಲ…ಮಾನಸಿಕ ಅಸ್ವಸ್ಥನಂತೂ ಅಲ್ಲವೇ ಅಲ್ಲ.!! ಕೆಲವೊಂದು ಘಟನೆಗಳು, ಕೆಲವೊಂದು ಸಂದರ್ಭ, ಕೆಲವೊಂದು ಪರಿಸ್ಥಿಯಿಂದಾಗಿ ನಮ್ಮಂತೆಯೇ ಇದ್ದವರೂ ಕೂಡಾ ವಿಧಿಯಾಟಕ್ಕೆ ಸಿಲುಕಿ ಸಮಾಜದಿಂದ ತುಳಿತಕ್ಕೊಳಗಾಗುತ್ತಾರೆ.

ಅಂತೆಯೇ ವಿಟ್ಲ ಸುತ್ತಮುತ್ತ ಕೆಲದಿನಗಳಿಂದ ಅಲೆದಾಡುತ್ತಾ ಕಂಡಕಂಡವರಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಹುನ್ನರಿಗೆಯ ಅಪ್ಪಣ್ಣ(38) ಕಳೆದ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಡ ಜನರ, ಅನಾರೋಗ್ಯ ಪೀಡಿತರ ಕತ್ತಲ ಬದುಕಿಗೆ ಬೆಳಕಾಗುತ್ತಾ ಆಪತ್ಭಾಂಧವನಾಗಿ ನೊಂದವರ ಕತ್ತಲ ಬದುಕಿಗೆ ಬೆಳಕಾಗುತ್ತಿರುವ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ಸಂಘಟನೆಯವರ ಕಣ್ಣಿಗೆ ಬಿದ್ದಿರೋದು ಅದೇಬಡಪಾಯಿ ಅಪ್ಪಣ್ಣ.

ಮೂರು ವರ್ಷಗಳಿಂದ ತನ್ನ ಗಾಡಿಯೊಂದಿಗೆ ಊರೂರು ಅಲೆದಾಡುತ್ತಿದ್ದ ಅಪ್ಪಣ್ಣ ಇಂದು( ಗುರುವಾರ) ಬೆಳಗ್ಗೆ ವಿಟ್ಲದ ಮಂಗಳೂರು ರಸ್ತೆಯಲ್ಲಿ ಸುತ್ತಾಡುತ್ತಿದ್ದಂತೆ ಮುರಳೀಧರ ನೇತೃತ್ವದ ತಂಡ ಆತನನ್ನು ಹಿಡಿದು ಮನವೊಲಿಸಿತು. ಬಳಿಕ ತಮ್ಮದೇ ಅಂಬ್ಯುಲೆನ್ಸಲ್ಲಿ ಅಪ್ಪಣ್ಣನನ್ನು ಕುಳ್ಳಿರಿಸಿ ಕೇರಳದ ಮಂಜೇಶ್ವರ ತಾಲೂಕಿನ ದೈಗೋಳಿಯಲ್ಲಿರುವ ವೃದ್ಧರ, ಅನಾರೋಗ್ಯ ಪೀಡಿತರ, ತಮ್ಮವರಿಂದ ತಿರಸ್ಕರಿಸ್ಪಟ್ಟು ಮಾನಸಿಕ ಅಸ್ವಸ್ಥರಾಗಿ ಅಪ್ಪಣ್ಣನಂತಾಗಿರುವ ನೂರಾರು ಬಡ ಜೀವಗಳಿಗೆ ಪುನರ್ಜನ್ಮ ಕಲ್ಪಿಸುತ್ತಿರುವ ಸಾಯಿ ನಿಕೇತನ ಸೇವಾಶ್ರಮ(ರಿ) ಕ್ಕೆ ದಾಖಲಿಸಿದೆ. ಫ್ರೆಂಡ್ಸ್ ವಿಟ್ಲದ ಸಮಾಜಮುಖಿ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ದೈಗೋಳಿಯಲ್ಲಿರುವ ವೃದ್ಧರ, ಅನಾರೋಗ್ಯ ಪೀಡಿತರ, ತಮ್ಮವರಿಂದ ತಿರಸ್ಕರಿಸ್ಪಟ್ಟು ಮಾನಸಿಕ ಅಸ್ವಸ್ಥರಾಗಿ
ಅಪ್ಪಣ್ಣನಂತಾಗಿರುವ ನೂರಾರು ಬಡ ಜೀವಗಳಿಗೆ ಪುನರ್ಜನ್ಮ ಕಲ್ಪಿಸುತ್ತಿರುವ ಸಾಯಿ ನಿಕೇತನ ಸೇವಾಶ್ರಮ(ರಿ) ಕ್ಕೆ ದಾಖಲಿಸಿದೆ. ಫ್ರೆಂಡ್ಸ್ ವಿಟ್ಲದ ಸಮಾಜಮುಖಿ ಕಾರ್ಯ ಮತ್ತು ಇದಕ್ಕೆ ಬೆನ್ನೆಲುಬಾಗಿರುವ ದೈಗೋಳಿಯ ಸಾಯಿನಿಕೇತನ ಸೇವಾಶ್ರಮದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

vtv vitla
vtv vitla
- Advertisement -

Related news

error: Content is protected !!