- Advertisement -
- Advertisement -
ಮೂಡುಬಿದಿರೆ: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಡುಬಿದಿರೆ ಬೆರಿಂಜೆಗುಡ್ಡೆ ನಿವಾಸಿ ದಿನೇಶ್ ಪೂಜಾರಿ(36), ಉಳಗುಡ್ಡೆ ನಿವಾಸಿ ಸುಕೇಶ್ ಪೂಜಾರಿ(32), ನಿರ್ಪನ್ ದಡ್ಕೆ ನಿವಾಸಿ ಹರೀಶ್ ಪೂಜಾರಿ(34) ಬಂಧಿತ ಆರೋಪಿಗಳಾಗಿದ್ದಾರೆ.

ಮೂಡಬಿದ್ರಿಯ ಬೇರಿಂಜೆ ಗುಡ್ಡೆ ಎಂಬಲ್ಲಿ ದರೋಡೆ ಪ್ರಕರಣ ವರದಿಯಾಗಿತ್ತು. ಕಮಲ ಎಂಬ ಮಹಿಳೆಯ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಖದೀಮರು ದರೋಡೆಗೈದಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕಳವುಗೈದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








