Wednesday, May 22, 2024
spot_imgspot_img
spot_imgspot_img

ಯುವಕನಿಗೆ ವಿಡಿಯೋ ಕಾಲ್​ ಮಾಡಿ ಯುವತಿಯಿಂದ ಬ್ಲ್ಯಾಕ್​ಮೇಲ್; ಹಣಕ್ಕಾಗಿ ಡಿಮ್ಯಾಂಡ್

- Advertisement -G L Acharya panikkar
- Advertisement -

ಮೈಸೂರು: ವಿಡಿಯೋ ಕಾಲ್​ ಮಾಡಿ ಯುವಕನಿಗೆ ಯುವತಿಯಿಂದ ಬ್ಲ್ಯಾಕ್​ಮೇಲ್ ​ಮಾಡಿರುವಂತಹ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.

ವಾಸು ಬ್ಲ್ಯಾಕ್​ಮೇಲ್‌ಗೊಳಗಾದ ಯುವಕ. ವಾಸುಗೆ ಹಣ ನೀಡುವಂತೆ ಯುವತಿ ಬ್ಲ್ಯಾಕ್​ಮೇಲ್ ಮಾಡಿದ್ದು, ವಿಡಿಯೋ ಕಾಲ್​ಗೂ ಮೊದಲು ಮೆಸೇಜ್​ ಮಾಡಿ ತನ್ನನ್ನು ಅಮೃತಾ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಬೆಳಗ್ಗೆ 9 ಗಂಟೆ ಸುಮಾರಿಗೆ ವಿಡಿಯೋ ಕಾಲ್​​ ಮಾಡಿ ಯುವತಿ ನಗ್ನಳಾಗಿದ್ದಾಳೆ. ಕೂಡಲೇ ವಾಸು ವಿಡಿಯೋ ಕಾಲ್​ ಕಟ್ ಮಾಡಿದ್ದಾನೆ.

ಬಳಿಕ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿದ ಯುವತಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕ ವಾಸು ದೂರು ದಾಖಲು ಮಾಡಿದ್ದಾರೆ.

- Advertisement -

Related news

error: Content is protected !!