- Advertisement -
- Advertisement -
ಲಕ್ನೋ: ನಾಲ್ವರು ಮುಸ್ಲಿಂಮರು ರೈಲಿನಲ್ಲಿ ನಮಾಝ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮಾಝ್ ನಿರ್ವಹಿಸಿದ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅ.20ರಂದು ಉತ್ತರ ಪ್ರದೇಶದ ಮಾಜಿ ಶಾಸಕ ದೀಪಲಾಲ್ ಭಾರ್ತಿ ಅವರು ಸತ್ಯಾಗ್ರಹ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ವಿಡಿಯೋ ಚಿತ್ರೀಕರಿಸಿದ್ದಾರೆ.
ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ ವೇಳೆ ಕೆಲವು ಮುಸ್ಲಿಮರು ಸ್ಲೀಪರ್ ಕೋಚ್’ನಲ್ಲಿ ನಮಾಝ್ ನಿರ್ವಹಿಸುತ್ತಿರೋದನ್ನು ಚಿತ್ರೀಕರಿಸಿದ್ದೇನೆ. ಅವರ ವರ್ತನೆಯಿಂದಾಗಿ ಸಹ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಹೆಚ್ಚಿನ ಪ್ರಯಾಣಿಕರಿಗೆ ಒಳಗೆ ಬರಲು ಮತ್ತು ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಶಾಸಕ ದೀಪಲಾಲ್ ಭಾರ್ತಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ರೈಲ್ವೇ ಅಧಿಕಾರಿಗಳಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
- Advertisement -