Tuesday, April 23, 2024
spot_imgspot_img
spot_imgspot_img

ಲೆಕ್ಕಕ್ಕುಂಟು…ಆಟಕ್ಕಿಲ್ಲದ ಸಾಲೆತ್ತೂರು ಕೆನರಾ ಬ್ಯಾಂಕ್ ATM

- Advertisement -G L Acharya panikkar
- Advertisement -

ಸಾಲೆತ್ತೂರು: ಸುಮಾರು 16 ಸಾವಿರ ಜನಸಂಖ್ಯೆ ಹೊಂದಿರುವ ಬಂಟ್ವಾಳ ತಾಲೂಕಿನ ಅತೀ ದೊಡ್ಡ ಗ್ರಾಮವಾಗಿರುವ ಕೊಳ್ನಾಡು ಗ್ರಾಮ ಮತ್ತು ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಸಾಲೆತ್ತೂರು ಗ್ರಾಮಕ್ಕಿರುವುದು ಒಂದೇ ಒಂದು ಕೆನರಾ ಬ್ಯಾಂಕ್ ATM.

ಶತಮಾನದ ವರ್ಷಾಚರಣೆಗೆ ಹೆಜ್ಜೆ ಹಾಕುತ್ತಿದ್ದ ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಇದೀಗ ಕೆನರಾ ಬ್ಯಾಂಕ್ ಆಗಿ ಪುನರ್ಜನ್ಮ ಪಡೆದಿದೆ. ಆದರೆ ಗ್ರಹಚಾರ ಮಾತ್ರ ಇನ್ನೂ ಬಿಟ್ಟಿಲ್ಲ. ಇಂಥಾ ದರಿದ್ರ ಅಧಿಕಾರಿಗಳು ಇದ್ದಷ್ಟು ದಿನ ಗ್ರಹಚಾರ ಬಿಡೋದೂ ಇಲ್ಲ.

ಸಿಬ್ಬಂದಿಗಳ ಹೆಂಡ್ತಿ, ಮಕ್ಳನ್ನ ಸಾಕೋದಕ್ಕಾಗಿ ಬ್ಯಾಂಕ್ ಇರೋದಾ ಅಥವಾ ಗ್ರಾಹಕರ ಉದ್ಧಾರಕ್ಕಾಗಿ ಸಿಬ್ಬಂದಿಗಳು ದುಡಿಯೋದಾ ಎಂಬುದು ಅರ್ಥವಾಗ್ತಿಲ್ಲ. ಬ್ಯಾಂಕ್ ಓಪನ್ ಆದ ಬಳಿಕ ಸಂಜೆ ಮುಚ್ಚೋತನಕ ಸೇವೆ ನೀಡುತ್ತಿದ್ದ ATM ಬಳಿಕ ಮರುದಿನ ಓಪನ್ ಆಗ್ತಿತ್ತು. ಆದ್ರೆ ರಜಾದಿನಗಳಲ್ಲಿ ಬಂದ್. ಇದೀಗ ಕೆಲದಿನಗಳಿಂದ ಕಛೇರಿ ಸಮಯದಲ್ಲಿ ATM ಬಾಗಿಲು ತೆರಿದಿದ್ದರೂ ಹಣ ಒದಗಿಸುವ ಸೇವೆಯಿಲ್ಲದಾಗಿದೆ.

ಬ್ಯಾಂಕ್ ಮೆನೇಜರಲ್ಲಿ ಕೇಳಿದ್ರೆ ಅವ್ರಿಗೆ ಸೌಜನ್ಯದಿಂದ ಉತ್ತರಿಸಲು ತಾಳ್ಮೆಯಿಲ್ಲದಾಗಿದೆ. ಇಲ್ಲಿನ ಬ್ಯಾಂಕ್ ಸಿಬ್ಬಂದಿಗಳ ಅಹಂಕಾರದ ವರ್ತನೆಗೆ ಅದ್ಯಾವ ಶಿಕ್ಷೆ ಕೊಟ್ಟರೂ ಕಮ್ಮಿನೇ. ಗ್ರಾಮೀಣ ಪ್ರದೇಶವಾಗಿರುವ ಕೊಳ್ನಾಡು, ಸಾಲೆತ್ತೂರು ಅವಳಿ ಗ್ರಾಮಗಳ ನೂರಾರು ಗ್ರಾಹಕರು ತಮ್ಮ ಕೆಲಸ ಕಾರ್ಯಗಳಿಗೆ ಬಂದಲ್ಲಿ ಸಿಬ್ಬಂದಿಗಳು ಸತಾಯಿಸುತ್ತಾ ರಕ್ತ ಕುಡಿಯುತ್ತಿದ್ದಾರೆ. ತಿಂಗಳ ಸಂಬಳ ಪಡೆಯಲು ತುದಿಗಾಲಲ್ಲಿ ನಿಲ್ಲುವ ದರಿದ್ರ ಸಿಬ್ಬಂದಿಗಳಿಗೆ ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು, ಯಾವ ರೀತಿ ಸೇವೆ ನೀಡಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲದಾಗಿದೆ.

ಎನಿ ಟೈಮ್ ಮನಿ ನೀಡ್ಬೇಕಾಗಿದ್ದ ಸಾಲೆತ್ತೂರಿನ ATM ಗ್ರಾಹಕರ ಪಾಲಿಗೆ ಎನಿ ಟೈಮ್ ಮೌನವಾಗಿದೆ. ಹರಕೆ ತೀರಿಸುವುದಕ್ಕಾಗಿ ಎಟಿಎಂ ಹಾಕಿದರೋ…ಗ್ರಾಹಕರ ಸೇವೆಗಾಗಿ ಹಾಕಿದರೋ ಎಂಬುದಕ್ಕೆ ಕೆನರಾ ಬ್ಯಾಂಕಿನ ತಲೆ ಸರಿಯಿದ್ದ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಇನ್ನಾದರೂ ಸಾಲೆತ್ತೂರು ಕೆನರರಾ ಬ್ಯಾಂಕ್ ಶಾಖೆಯ ಸಿಬ್ಬಂದಿಗಳಿಗೆ ಗ್ರಾಹಕರ ಜೊತೆ ಮಾನವೀಯತೆಯಿಂದ ವರ್ತಿಸುತ್ತಾ ಸೇವೆ ನೀಡಲು ಹಿರಿಯ ಅಧಿಕಾರಿಗಳೇ ಕಲಿಸಬೇಕಾಗಿದೆ.

ವರದಿ: ವಿ.ಟಿ.ಪ್ರಸಾದ್

- Advertisement -

Related news

error: Content is protected !!