Saturday, April 20, 2024
spot_imgspot_img
spot_imgspot_img

ಲೈಂಗಿಕ ಅಪರಾಧಿಗಳಿಗೆ ಜೈಲು ಶಿಕ್ಷೆ ಕಡಿಮೆ ಮಾಡಲು ಹೊಸ ಆಯ್ಕೆ.!! ಈ ಚಿಕಿತ್ಸೆ ಮಾಡಿದ್ರೆ ಅಪರಾಧ ಕಡಿಮೆಯಾಗುತ್ತಾ???

- Advertisement -G L Acharya panikkar
- Advertisement -

ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಥಾಯ್ಲೆಂಡ್​ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಲೈಂಗಿಕ ಅಪರಾಧಿಗಳಿಗೆ ಸ್ವಯಂ ಪ್ರೇರಿತ ಕೆಮಿಕಲ್​ ಕ್ಯಾಸ್ಟ್ರೇಶನ್ (ಲೈಂಗಿಕ ಹಾರ್ಮೋನ್ ಉತ್ಪಾದನೆ ನಿಲ್ಲಿಸಲು ರಾಸಾಯನಿಕಗಳು ಅಥವಾ ಔಷಧಗಳ ಬಳಕೆ) ಮಾಡಲು ಮಸೂದೆಯನ್ನು ಕಾನೂನು ಸಚಿವಾಲಯ ಪ್ರಸ್ತಾಪಿಸಿದೆ. ಇದಕ್ಕೆ‌ ಥಾಯ್ಲೆಂಡ್ ಸೆನೆಟ್​ ಅಥವಾ ಥಾಯ್ಲೆಂಡ್​ ರಾಷ್ಟ್ರೀಯ ಪರಿಷತ್​ ಅಂಗೀಕರಿಸಿರುವುದಾಗಿ​ ಹೇಳಿದೆ.

ಈ ಮಸೂದೆ ಹೇಗೆ ಅನ್ವಯಿಸುತ್ತದೆ.??
ಈ ಮಸೂದೆಯ ಅಡಿಯಲ್ಲಿ, ಮತ್ತೊಮ್ಮೆ ಲೈಂಗಿಕ ಅಪರಾಧ ಎಸಗುವ ಆತಂಕ ಹೊಂದಿರುವ ಕೆಲವು ಲೈಂಗಿಕ ಅಪರಾಧಿಗಳು ಬಯಸಿದ್ದಲ್ಲಿ, ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವ ಚುಚ್ಚುಮದ್ದನ್ನು ಸ್ವೀಕರಿಸುವ ಆಯ್ಕೆಯನ್ನು ನೀಡಲಾಗಿದೆ. ಚುಚ್ಚುಮದ್ದು ಸ್ವೀಕರಿಸಿದರೆ ಅದಕ್ಕೆ ಪ್ರತಿಯಾಗಿ ಕಡಿಮೆ ಜೈಲು ಶಿಕ್ಷೆಯನ್ನು ನೀಡಲಾಗುತ್ತಿದೆ.

Close-up medical syringe with a vaccine.

ಅಂದಹಾಗೆ ಕೆಮಿಕಲ್​ ಕ್ಯಾಸ್ಟ್ರೇಶನ್ ಈಗಾಗಲೇ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ದಕ್ಷಿಣ ಕೊರಿಯಾ, ಪಾಕಿಸ್ತಾನ, ಪೋಲೆಂಡ್​ ಮತ್ತು ಯುನೈಟೆಡ್​ ಸ್ಟೇಟ್ಸ್​ನ 8 ರಾಜ್ಯಗಳು ಕೆಮಿಕಲ್​ ಕ್ಯಾಸ್ಟ್ರೇಶನ್ ಅಳವಡಿಸಿಕೊಂಡಿವೆ. ನಾರ್ವೆ, ಡೆನ್ಮಾರ್ಕ್​ ಮತ್ತು ಜರ್ಮನಿಯಲ್ಲಿ ಗಂಭೀರವಾರ ಲೈಂಗಿಕ ಅಪರಾಧಗಳಿಗೆ ಸರ್ಜಿಕಲ್​ ಕೆಮಿಕಲ್​ ಕ್ಯಾಸ್ಟ್ರೇಶನ್ ಮಾಡಲಾಗುತ್ತದೆ.

ಇನ್ನು ಈ ಪ್ರಯೋಗಕ್ಕೆ‌ ಹಲವರು ವಿರೋಧಿಸಿದ್ದಾರೆ. ಈ ಚಿಕಿತ್ಸೆಯ ಬಳಿಕಗೂ ಅಪರಾಧ ಕಡಿಮೆಯಾಗುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

- Advertisement -

Related news

error: Content is protected !!