Saturday, April 20, 2024
spot_imgspot_img
spot_imgspot_img

ವಾಹನದ ಟಾಪ್‌‌ನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ; ಇಬ್ಬರ ಬಂಧನ

- Advertisement -G L Acharya panikkar
- Advertisement -

ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ 130 ಕೆಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ಕೋರಾಪುಟ್‌ ಪ್ರದೇಶದ ಪಾಂಗಿ ಮಹೇಶ್ವರ್ ಮತ್ತು ದುಂಬ್ರಿಗುಡಾದ ರಮೇಶ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಗಾಂಜಾ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಆರೋಪಿಗಳು ತಮ್ಮ ಬೊಲೆರೋ ವಾಹನದ ಟಾಪ್‌ ನಲ್ಲಿ ಗಾಂಜಾ ಪಾಕೆಟ್‌ ಗಳನ್ನು ಇಟ್ಟು ರಾಜ್ಯದ ಗಡಿಯನ್ನು ದಾಟಲು ಯತ್ನಿಸುತ್ತಿದ್ದು, ಅನುಮಾನಾಸ್ಪದವಾಗಿ ಕಂಡ ಪೊಲೀಸರು ವಾಹನವನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ.

ತಪಾಸಣೆ ವೇಳೆ ಬೊಲೆರೋ ವಾಹನದಲ್ಲಿ ಟಾಪ್‌ ನಲ್ಲಿ ವಿಶೇಷವಾದ ಶೆಲ್ಫ್‌ ಮಾಡಿರುವುದು ಗೊತ್ತಾಗಿದ್ದು, ಅದರ ಒಳಗಡೆ ನೋಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ.

- Advertisement -

Related news

error: Content is protected !!