Friday, May 3, 2024
spot_imgspot_img
spot_imgspot_img

ವಿಟ್ಲ: ಈದ್ ಕಮಿಟಿ ನೇತೃತ್ವದಲ್ಲಿ ಮೆಹ್ ಫಿಲೇ ಈದ್ 2023 ಕಾರ್ಯಕ್ರಮ:

- Advertisement -G L Acharya panikkar
- Advertisement -

ಮಾನಸಿಕತೆಯನ್ನು ಬದಲಾಯಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಮಹಮ್ಮದ್ ಕುಂಞ

ವಿಟ್ಲ: ಈದ್ ಕಮಿಟಿ ವಿಟ್ಲ ವತಿಯಿಂದ ವಿಟ್ಲ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಮೆಹ್ ಫಿಲೇ ಈದ್ 2023 ಕಾರ್ಯಕ್ರಮ ಒಕ್ಕೆತ್ತೂರು ಸಿಂಹಗಿರಿ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅವರು ಈದ್ ಸಂದೇಶ ನೀಡಿ ಮಾತನಾಡಿ ನಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ಅಧರ್ಮ, ಅಕ್ರಮವನ್ನು ಪ್ರವಾದಿ ವಿರೋಧಿಸಿದ್ದಾರೆ. ಧರ್ಮವನ್ನು ಅರಿತು ಬಾಳಿದರೆ ಸಮಾಜದಲ್ಲಿ ಸಮಸ್ಯೆಗಳು ಬರುವುದಿಲ್ಲ. ಸಂಬಂಧವನ್ನು ಸರಿಪಡಿಸಬೇಕು. ಎಲ್ಲರೂ ಅನ್ಯೋನ್ಯತೆಯಿಂದ ಬಾಳುವುದೇ ಧರ್ಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜಮೀಯತ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ ವಿಟ್ಲದ ಜನತೆ ಸೌಹಾರ್ದತೆಯನ್ನು ಬಯಸುವ ಜನರಾಗಿದ್ದಾರೆ. ಇಲ್ಲಿ ಯಾವುದೇ ಅಹಿತಕರ ಘಟನೆಗೆ ಬೆಂಬಲ ನೀಡುವುದಿಲ್ಲ. ವೆನ್ಲಾಕ್ ಆಸ್ಪತ್ರೆಯಲ್ಲಿ ನಿರಂತರವಾಗಿ ರೋಗಿಗಳ ಸೇವೆ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಜಾತಿ, ಧರ್ಮ ನೋಡದೇ ಸೇವೆ ಮಾಡಲಾಗುತ್ತಿದೆ ಎಂದರು.

ಡಾ. ಗೀತಪ್ರಕಾಶ್, ನ್ಯಾಯವಾದಿ ಜಯರಾಮ ರೈ, ಹನೀಪ್ ಹಾಜಿ ಗೋಳ್ತಮಜಲು ಅನಿಸಿಕೆ ವ್ಯಕ್ತಪಡಿಸಿದರು. ಯೂಸುಪ್ ಮೇಗಿನಪೇಟೆ, ಇಕ್ಬಾಲ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಈದ್ ಕಮಿಟಿ ಸಂಚಾಲಕ ಅಝೀಜ್ ಸನ, ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ ಬಿ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಲಿಯೋ ಅಧ್ಯಕ್ಷ ಸಹಲನ್ ಉಪಸ್ಥಿತರಿದ್ದರು. ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಸ್ವಾಗತಿಸಿದರು. ಅಬೂಬಕ್ಕರ್ ವಿಟ್ಲ ವಂದಿಸಿದರು. ಶಾಕೀರ್ ಅಳಕೆಮಜಲು ನಿರೂಪಿಸಿದರು. ಕಲಂದರ್ ಪರ್ತಿಪ್ಪಾಡಿ ಸಹಕರಿಸಿದರು.

- Advertisement -

Related news

error: Content is protected !!