Tuesday, May 7, 2024
spot_imgspot_img
spot_imgspot_img

ವಿಟ್ಲ: ಎರುಂಬು ಶ್ರೀ ವಿಷ್ಣುಮಂಗಲ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ ʼವಿಶ್ವಾಧಾರಂʼ ಉದ್ಘಾಟನೆ

- Advertisement -G L Acharya panikkar
- Advertisement -

ವಿಟ್ಲ: ದೇವಾಲಯಗಳು ಸಮಾಜವನ್ನು ಉದ್ಧರಿಸುವ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಭಕ್ತರನ್ನು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸುತ್ತಲಿನ ಪರಿಸರದಲ್ಲಿ ಪರಿವರ್ತನೆಯಾಗುತ್ತದೆ ಎಂದು ವಿಟ್ಲ ಸೀಮೆ ಅರಮನೆಯ ಶ್ರೀ ಬಂಗಾರು ಅರಸರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮಂಗಲ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ ʼವಿಶ್ವಾಧಾರಂʼನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಅರ್ಚಕರಾದ ಬಾಲಕೃಷ್ಣ ಕಾರಂತರಿಂದ ಗಣಪತಿ ಹವನದ ನಡೆದ ನಂತರ ನೂತನ ಪಾಕಶಾಲೆಯಲ್ಲಿ ಹಾಲು ಉಕ್ಕಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್, ಕಾನ ಈಶ್ವರ ಭಟ್, ಹರಿಪ್ರಸಾದ್ ಯಾದವ್, ಪಾಂಡಾಜೆ ಕೃಷ್ಣವರ್ಮ ಉಪಸ್ಥಿತರಿದ್ದರು. ಎಲ್ಲಾ ಶ್ರಮಸೇವಕರನ್ನು ಗೌರವಿಸಲಾಯಿತು.

ಸುಜ್ಞಾನ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶಾಲಿನಿ ಸದಾನಂದ ಶೆಟ್ಟಿ, ವಿನಯ ಲೋಕನಾಥ ರೈ ಮತ್ತು ಉಷಾ ವಸಂತರವರು ಪ್ರಾರ್ಥನೆ ನಡೆಸಿಕೊಟ್ಟರು. ನೂತನ ಸಭಾಭವನದ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಕುಲಾಲ್ ಧನ್ಯವಾದ ಸಲ್ಲಿಸಿದರು. ಅರ್ಚಕರಾದ ಬಾಲಕೃಷ್ಣ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!