Friday, April 26, 2024
spot_imgspot_img
spot_imgspot_img

ವಿಟ್ಲ: ಕರ್ನಾಟಕ-ಕೇರಳ ಪೊಲೀಸರ ನಿದ್ದೆಗೆಡಿಸಿ ಸವಾಲಾಗಿದ್ದ ಕುಖ್ಯಾತ ರೌಡಿ ಜಿಯಾ ಮುಂಬೈ ಪೊಲೀಸರ ವಶಕ್ಕೆ..!

- Advertisement -G L Acharya panikkar
- Advertisement -

ವಿಟ್ಲ: ಕರ್ನಾಟಕ-ಕೇರಳ ಪೊಲೀಸರ ನಿದ್ದೆಗೆಡಿಸಿ ಸವಾಲಾಗಿದ್ದ ಕುಖ್ಯಾತ ರೌಡಿ ಜಿಯಾನನ್ನು ಮುಂಬೈ ಸಹರಾ ಏರ್ಫೋರ್ಟಲ್ಲಿ ಇಮಿಗ್ರೇಷನ್ ಅಧಿಕಾರಿಗಳ ತಂಡ ಬಂಧಿಸಿದ್ದಾರೆ.

ಕನ್ಯಾನ ಜೋಡಿ ಕೊಲೆ, ಬಾಲಿಕಾ ಅಝೀಜ್ ಕೊಲೆ, ಕಾಲಿಯಾ ರಫೀಕ್ ಕೊಲೆ ಸೇರಿದಂತೆ ಕೊಲೆ ಯತ್ನ, ಅಪಹರಣ, ದರೋಡೆ ಹದಿನಾಲ್ಕಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕರ್ನಾಟಕ, ಕೇರಳ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಜಿಯಾ ನನ್ನು ಮುಂಬೈ ಸಹರಾ ಏರ್ ಪೋರ್ಟ್ ನಲ್ಲಿ ಇಮಿಗ್ರೇಷನ್ ಅಧಿಕಾರಿಗಳ ತಂಡ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ-ಕೇರಳ ಪೊಲೀಸರ ನಿದ್ದೆಗೆಡಿಸಿದ್ದ ಕುಖ್ಯಾತ ರೌಡಿ ಜಿಯಾ ಮುಂಬೈ ಸಹರಾ ಏರ್ಫೋರ್ಟಲ್ಲಿ ಇಮಿಗ್ರೇಷನ್ ಅಧಿಕಾರಿಗಳ ಬಲೆಗೆ ಬಿದಿದ್ದು, ಆತನ ವಿಚಾರಣೆಯ ಬಳಿಕ ಇನ್ನೆಷ್ಟು ಪ್ರಕರಣಗಳಿಗೆ ಜೀವ ಬರಲಿದೆ ಎಂದು ಕಾದು ನೋಡಬೇಕಿದೆ.

ಜೀಯಾ ವಿದೇಶದಲ್ಲಿದ್ದು, ರಹಸ್ಯವಾಗಿ ತವರಿಗೆ ಮರಳಿದ್ದ ಜಿಯಾ ಇಂದು ಬೆಳಗ್ಗೆ ವಿದೇಶಕ್ಕೆ ಮರಳಲು ಮುಂಬೈನ ಸಹಾರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನಟಿ ಲೀನಾ ಮರಿಯಾ ಪೌಲ್ ಅವರಿಗೆ ಬೆದರಿಕೆ ಹಾಕಿದರೂ ಹಣ ನೀಡದ ಹಿನ್ನೆಲೆಯಲ್ಲಿ ಜಿಯಾ ಅವರಿಗೆ ಸ್ಥಳೀಯ ನೆರವು ನೀಡಿದ್ದರು ಎಂದು ರವಿ ಪೂಜಾರಿ ಪೊಲೀಸರಿಗೆ ತಿಳಿಸಿದ್ದಾರೆ. ಇದು ಬಂಧನಕ್ಕೆ ಕಾರಣವಾಯಿತು ಎನ್ನಲಾಗಿದೆ. ಕೊಚ್ಚಿ ಪೊಲೀಸರು ಮುಂಬೈ ತಲುಪಿ ಜಿಯಾಳನ್ನು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ. ಇದರ ನಂತರ ವಿವರವಾದ ವಿಚಾರಣೆ ನಡೆಯಲಿದೆ. ಜಿಯಾ ಬಂಧನದಿಂದ ಇಡೀ ಪ್ರಕರಣಕ್ಕೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲವು ಮೂಲಗಳ ಪ್ರಕಾರ ಜೀಯಾ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!