Saturday, May 4, 2024
spot_imgspot_img
spot_imgspot_img

ವಿಟ್ಲ: ಕುಡಿಯುವ ನೀರಿನ ಅವ್ಯವಸ್ಥೆ; ಉಡಾಫೆ ವರ್ತನೆ ತೋರಿದ ಗ್ರಾ ಪಂ. ಸಿಬ್ಬಂದಿ ಕ್ಷಮೆಯಾಚನೆ!

- Advertisement -G L Acharya panikkar
- Advertisement -

ವಿಟ್ಲ: ಹತ್ತು ದಿನಗಳಿಂದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ವಿಟ್ಲ ಪಡ್ನೂರು ಪಂಚಾಯತ್ ನ ಸಿಬ್ಬಂದಿ ಕೃಷ್ಣ ಜೊತೆ ಮಹಿಳೆ ದೂರು ನೀಡಲು ಬಂದಿದ್ದರು.

ಮಹಿಳೆ ಸಮಸ್ಯೆ ಹೇಳುತ್ತಿದ್ದಂತೆ ಆವೇಶಭರಿತನಾದ ಸಿಬ್ಬಂದಿ ಕೃಷ್ಣ, ನೀರು ಬರುತ್ತಿಲ್ಲವಾದರೆ ಪೈಪ್ ಕಟ್ ಮಾಡಿ. ನಿಮಗೆಲ್ಲ ನೀರು ಕೊಡಲು ನನ್ನಿಂದ ಸಾಧ್ಯವಿಲ್ಲ. ಬಾವಿ ನೀರು ಕುಡಿಯಲು ಆಗ್ತಿಲ್ವಾ. ಬೇಕಿದ್ರೆ ನೀರು ಬಂದಾಗ ತುಂಬಿಸಿ ಇಟ್ಕೊಳ್ಳಿ..ಇಲ್ಲಾದ್ರೆ ಬಾಯಿ ಮುಚ್ಚಿ ಮನೆಯಲ್ಲಿ ಕೂತ್ಕೊಳ್ಳಿ ಎಂದು ಅರ್ಭಟಿಸಿದ್ದಾನೆಂದು ಮಹಿಳೆ ಅಲವತ್ತುಕೊಂಡಿದ್ದಾರೆ.

ತಾಯಿಯ ಅಸಹಾಯಕತೆ ಕಂಡ ಪುತ್ರ ಮನೋಜ್ ಕುಮಾರ್ ಪಂಚಾಯತ್ ಗೆ ಬಂದು ಸಿಬ್ಬಂದಿ ಜೊತೆ ಸಮಾಧಾನದಲ್ಲೇ ಪ್ರಶ್ನಿಸಿದ್ದರೂ ಸಿಬ್ಬಂದಿಯ ಪಿತ್ತ ಕೆಳಗಿಳಿದಿಲ್ಲ. ಬಳಿಕ ಯುವಕ ಭನೋಜ್ ಶಾಸಕರಲ್ಲಿ ಹೇಳ್ತೇನೆ. ದೈವಸ್ಥಾನದ ಮುಂದೆ ಬಂದು ಉದ್ದಟತನ ತೋರಿಲ್ಲವೆಂದು ಹೇಳ್ತೀಯಾ ಎಂದು ಪ್ರಶ್ನಿಸುತ್ತಿದ್ದಂತೆ ತನ್ನ ತಪ್ಪಿನ ಅರಿವಾದ ಸಿಬ್ಬಂದಿ ಪೆಚ್ಚುಮೋರೆ ಹಾಕಿ ಇಂಗುತಿಂದ ಮಂಗನಂತಾಗಿ ಕ್ಷಮಾಪಣೆ ಕೋರಿದ್ದಾನೆ.

- Advertisement -

Related news

error: Content is protected !!