Monday, June 8, 2026
spot_imgspot_img
spot_imgspot_img

ವಿಟ್ಲ: ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವರ್ಷಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ

- Advertisement -
- Advertisement -

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನ ದಲ್ಲಿ ಫೆಬ್ರವರಿ 14 (ಕುಂಭ ಸಂಕ್ರಮಣ) ದಂದು ವರ್ಷಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ. ಈ ಪ್ರಯುಕ್ತ ಇಂದು ಪುಂಡಿಕಾೈ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಅನಂತಕೋಡಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಪುಂಡಿಕಾೈ ಮನೆಯಲ್ಲಿ ಗೊನೆ ಮುಹೂರ್ತ ನಡೆಯಿತು. ಪುಂಡಿಕಾೈ ಮನೆಯಿಂದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳು ಆಗಮಿಸಿದ ನಂತರ ಗೊನೆ ಮುಹೂರ್ತ ಪೂಜೆ ನಡೆಯಿತು.

ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ಉಳ್ಳಾಲ್ತಿ ಅಮ್ಮನವರ ಸನ್ನಿಧಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಶಂಕರ ನಾರಾಯಣ ಭಟ್ ಪುಂಡಿಕಾಯಿ , ಬೆಂಞಣ್ತಿಮಾರ್‌ ಗುತ್ತು ಗಿರಿಧರ ರೈ ಯಾನೆ ಮಂಜಾಳ್ವರು, ಕೆಲಿಂಜ ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!