Friday, July 24, 2026
spot_imgspot_img
spot_imgspot_img

ವಿಟ್ಲ: ಕೇಸರಿ ಶಾಲು ಧರಿಸಿದರೆ ಹುಷಾರ್; ಅಡ್ಯನಡ್ಕದಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು

- Advertisement -
- Advertisement -

ವಿಟ್ಲ: ಅನ್ಯಕೋಮಿನ ತಂಡವೊಂದು ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಸೆ.26 ರಂದು ರಾತ್ರಿ ಅಡ್ಯನಡ್ಕದ ಮರಕ್ಕಿಣಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಗಿರೀಶ್ (33) ಎಂದು ಗುರುತಿಸಲಾಗಿದೆ.

ಗಿರೀಶ್ ರವರು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಅಡ್ಡಗಟ್ಟಿದ ಅನ್ಯಕೋಮಿನ ತಂಡ ‘ನೀನು ಕೇಸರಿ ಶಾಲು ಹಾಕಿಕೊಂಡು ಬಾರಿ ತಿರುಗಾಟ ನಡೆಸುತ್ತಿಯಾ ಎಂದು ಗದರಿಸಿ ಹಲ್ಲೆ ನಡೆಸಿದ್ದಾರೆ’.

ಹಲ್ಲೆ ನಡೆಸಿದವರ ಪೈಕಿ ಮಹಮ್ಮದ್, ಅಲಿ ಎಂಬಿಬ್ಬರ ಪರಿಚಯವಿದೆ. ಮತ್ತೆ ನಾಲ್ವರನ್ನು ಇನ್ನೊಮ್ಮೆ ನೋಡಿದರೆ ಗುರುತಿಸಬಲ್ಲೆ, ಈ ತಂಡ ನನ್ನನ್ನು ದಾರಿ ಮಧ್ಯೆ ಅಡ್ಡ ಕಟ್ಟಿ ಕೇಸರಿ ಶಾಲು ಹಾಕಿದ್ದಕ್ಕೆ ಬೆದರಿಸಿ, ಕೈಗೆ ಯಾವುದೋ ಉಪಕರಣದಿಂದ ಬಲವಾಗಿ ಚುಚ್ಚಿದ್ದಾರೆ ಇದರಿಂದಾಗಿ ಗಾಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತಮ್ಮನಿಗೆ ಕರೆ ಮಾಡಿದೆ ಬಳಿಕ ಅಲ್ಲಿಗೆ ಬಂದ ನನ್ನ ತಮ್ಮ ನನ್ನನ್ನು ಆಸ್ಪತ್ರೆಗೆ ಕರೆ ತಂದ ಎಂದು ಗಿರೀಶ್ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಗಿರೀಶ್ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ ಕೇರಳದಿಂದ ಬಂದ ತಂಡ ಹಲ್ಲೆ ನಡೆಸಿದೆ ಎಂಬ ಮಾಹಿತಿ ಕೂಡ ಇದೆ.

driving
- Advertisement -

Related news

error: Content is protected !!