Sunday, June 14, 2026
spot_imgspot_img
spot_imgspot_img

ವಿಟ್ಲ ಜಾತ್ರೋತ್ಸವದ ಅಂಗವಾಗಿ ಆರ್ ಕೆ ಕಲಾ ಸಂಸ್ಥೆ(ರಿ)ವಿಟ್ಲ ಇವರಿಂದ ನೃತ್ಯ ಸಂಭ್ರಮ 2022 ಹಾಗೂ ಸನ್ಮಾನ ಸಮಾರಂಭ

- Advertisement -
- Advertisement -
suvarna gold

ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವದ ಸಲುವಾಗಿ ಜರಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಜ.19 ರಂದು ಸಂಜೆ 7 ರಿಂದ ಆರ್ ಕೆ ಕಲಾಸಂಸ್ಥೆ(ರಿ)ವಿಟ್ಲ ಇವರಿಂದ ನೃತ್ಯ ಸಂಭ್ರಮ 2022 ಹಾಗೂ ಸನ್ಮಾನ ಸಮಾರಂಭವು ನಡೆಯಲಿದೆ.

ಇದನ್ನೂ ಓದಿ: ವಿಟ್ಲ: ಬಯಲಾಯ್ತು ರೋಹಿಣಿ ಅಲಿಯಾಸ್ ರೂಪಾಳ ಅಸಲಿ ವಿರೂಪ..!

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಜೇಶ್ ವಿಟ್ಲ ಇವರ ನಿರ್ದೇಶನದ ಆರ್ ಕೆ ಆರ್ಟ್ಸ್ ಚಿಣ್ಣರ ಮನೆ(ರಿ) ವಿಟ್ಲ ಇವರಿಂದ ನೃತ್ಯ ಸಂಭ್ರಮ 2022 ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನನ್ನು ವಿಟ್ಲ ಅರಮನೆಯ ಶ್ರೀ ಬಂಗಾರ ಅರಸರು ಸನ್ಮಾನಿಸಲಿದ್ದಾರೆ.

vtv vitla

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಬ್ರಾಯ ಪೈ(ಉದ್ಯಮಿಗಳು ವಿಟ್ಲ), ಕೃಷ್ಣಯ್ಯ ಕೆ.,ವಿಟ್ಲ ಅರಮನೆ, ಜಗನ್ನಾಥ್ ಸಾಲ್ಯಾನ್ (ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರು), ಅರುಣ್ ವಿಟ್ಲ, (ವಿಟ್ಲ ಪಟ್ಟಣ ಪಂಚಾಯತ್’ನ ಸದಸ್ಯರು), ಹರೀಶ್ ಸಿ. ಎಚ್. (ಅಧ್ಯಕ್ಷರು, ಬಿಲ್ಲವ ಸಂಘ ಮತ್ತು ಸದಸ್ಯರು, ವಿಟ್ಲ ಪಟ್ಟಣ ಪಂಚಾಯತ್).

ರಮನಾಥ ವಿಟ್ಲ (ವಿ.ಆರ್.ಸಿ. ವಿಟ್ಲ), ಸಂತೋಷ್ ಶೆಟ್ಟಿ ಪೆಲತ್ತಡ್ಕ, (ಸಿವಿಲ್ ಇಂಜಿನಿಯರ್ & ಕಾಂಟ್ರಕ್ಟರ್), ಮೋನಪ್ಪ ಗೌಡ, (ಅಧ್ಯಕ್ಷರು, ಲಯನ್ಸ್ ಕ್ಲಬ್ ವಿಟ್ಲ), ಸಂದೇಶ್ ಶೆಟ್ಟಿ (ಅಧ್ಯಕ್ಷರು, ಲಯನ್ಸ್ ಕ್ಲಬ್ ವಿಟ್ಲ ಸಿಟಿ), ಚಂದ್ರಹಾಸ ಕೊಪ್ಪಳ, (ಅಧ್ಯಕ್ಷರು, ಜೆ.ಸಿ.ಐ ವಿಟ್ಲ) ಅಣ್ಣಪ್ಪ ಸಾಸ್ತಾನ, (ಅಧ್ಯಕ್ಷರು, ರೋಟರಿ ಕ್ಲಬ್ ವಿಟ್ಲ) ಭಾಗವಹಿಸಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!