Friday, July 24, 2026
spot_imgspot_img
spot_imgspot_img

ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

- Advertisement -
- Advertisement -

ವಿಟ್ಲ: ನಿನ್ನೆ ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿ ಇಂದು ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪುಣಚ ಗ್ರಾಮದ ಪೊಯ್ಯೆಮೂಲೆ ಎಂಬಲ್ಲಿ ನಡೆದಿದೆ.

ಪುಣಚ ಗ್ರಾಮದ ಪೊಯ್ಯೆಮೂಲೆ ನಿವಾಸಿ ಕೃಷ್ಣ ನಾಯ್ಕ್‌(62) ಎಂಬವರು ಮೃತ ವ್ಯಕ್ತಿ.

ಕೃಷ್ಣ ನಾಯ್ಕ್‌ ರವರು ಸೆ.17ರಂದು ಮದ್ಯಾಹ್ನ ಮನೆಯಿಂದ ಹೊರಗಡೆ ಹೋದವರು ಸಂಜೆಯಾದರು ಮನೆಗೆ ಬಂದಿರದ ಕಾರಣ ಮಗ ನವೀನಕುಮಾರ್ ಹಾಗೂ ಅವರ ತಾಯಿ ಮನೆಯ ಸುತ್ತಮುತ್ತ ಹುಡುಕಾಡಿದ್ದು, ಅಲ್ಲದೇ ನೆರೆಕರೆಯವರಲ್ಲಿ ಹಾಗೂ ಸಂಬಂದಿಕರಲ್ಲಿ ತಂದೆಯ ಬಗ್ಗೆ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗದೆ ಇದ್ದು, ಇಂದು ಕೃಷ್ಣ ನಾಯ್ಕ್‌ ರವರು ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!