Sunday, July 19, 2026
spot_imgspot_img
spot_imgspot_img

ಅಳಿಕೆ: ಶ್ರೀ ಸ್ಟಂದ ಬಾಲ ಕಲಾ ವೃಂದ, ಅಳಿಕೆ ಹಾಗೂ ಯಕ್ಷಗಾನ ತರಬೇತಿ ಪಡೆದ ಬಾಲ ಕಲಾವಿದರ ರಂಗಪ್ರವೇಶ ಮತ್ತು ವಾರ್ಷಿಕೋತ್ಸವ

- Advertisement -
- Advertisement -

'ಸಂಸ್ಕಾರ ಭಾರತೀ' ದಕ್ಷಿಣ ಕನ್ನಡ ಜಿಲ್ಲೆ ಆಶ್ರಯದಲ್ಲಿ ಆಳಿಕೆ `ಸಂಸ್ಕಾರ ಸೌರಭ' ಮಕ್ಕಳಿಂದ 'ಮಾತೃಪೂಜನ' ಕಾರ್ಯಕ್ರಮ

ಅಳಿಕೆ: ಶ್ರೀ ಸ್ಟಂದ ಬಾಲ ಕಲಾ ವೃಂದ, ಅಳಿಕೆ ಹಾಗೂ ಯಕ್ಷಗಾನ ತರಬೇತಿ ಪಡೆದ ಬಾಲ ಕಲಾವಿದರ ರಂಗಪ್ರವೇಶ ಮತ್ತು ವಾರ್ಷಿಕೋತ್ಸವ ‘ಸಂಸ್ಕಾರ ಭಾರತೀ’ ದಕ್ಷಿಣ ಕನ್ನಡ ಜಿಲ್ಲೆ ಆಶ್ರಯದಲ್ಲಿ ಆಳಿಕೆ `ಸಂಸ್ಕಾರ ಸೌರಭ’ ಮಕ್ಕಳಿಂದ ‘ಮಾತೃಪೂಜನ’ ಕಾರ್ಯಕ್ರಮ ಅಳಿಕೆ ಚೆಂಡುಕಳ ಶ್ರೀ ಗಣೇಶ ಮಂದಿರದ ವಠಾರದಲ್ಲಿ ನಡೆಯಿತು.

ಸಂಜೆ ಸಂಸ್ಕಾರ ಭಾರತೀ ಪ್ರಾಯೋಜಿತ ಅಳಿಕೆ ಸಂಸ್ಕಾರ ಸೌರಭ ಮಕ್ಕಳಿಂದ ಮಾತೃ ಪೂಜನ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಸ್ಟಂದ ಬಾಲ ಕಲಾ ವೃಂದ, ಅಳಿಕೆ ಇದರ ಗೌರವ ಸಲಹೆಗಾರರು, ನಿವೃತ್ತ ಪ್ರಾಧ್ಯಾಪಕರು ಪೂವಪ್ಪ ಶೆಟ್ಟಿ ಅಳಿಕೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಟಿ. ತಾರಾನಾಥ ಕೊಟ್ಟಾರಿ ಜಿಲ್ಲಾಧ್ಯಕ್ಷರು, ಸಂಸ್ಕಾರ ಭಾರತೀ, ದ.ಕ.ಜಿಲ್ಲೆ, ಅನಿಲ್ ಪಂಡಿತ್ ಕೆ. ಉಪಾಧ್ಯಕ್ಷರು, ಸಂಸ್ಕಾರ ಭಾರತೀ, ದ.ಕ.ಜಿಲ್ಲೆ, ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷರು, ಅಳಿಕೆ ಗ್ರಾಮ ಪಂಚಾಯತ್, ರೂಪೇಶ್ ರೈ ಅಳಿಕೆಗುತ್ತು ಅಧ್ಯಕ್ಷರು, ಅಳಿಕೆ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಅಳಿಕೆ, ಚಂದ್ರನಾಥ ಆಳ್ವ ಮಿತ್ತಳಿಕೆ ನಿರ್ದೇಶಕರು, ಅಳಿಕೆ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಅಳಿಕೆ, ನವೀನ ಎಂ. ಅರಣ್ಯ ಪಾಲಕರು, ಪುತ್ತೂರು, ವಿಠಲ ಪ್ರಸಾದ್ ಚೆಂಡುಕಳ ಅಧ್ಯಕ್ಷರು, ಯಕ್ಷ ಪೋಷಕರು ಅಳಿಕೆ, ಅಶೋಕ್ ಕೊಜಪ್ಪ ಸ್ವಾಮಿ ಕೊರಗಜ್ಜ ಫೈನಾನ್ಸ್ ಪೆರುವಾಯಿ, ಹರಿಪ್ರಸಾದ್ ಅಟ್ಟೆಪಿಲ ಪರವಾನಗಿ ಭೂ ಮಾಪಕರು, ನಾರಾಯಣ ನೆಕ್ಕಿತ್ತಪುಣಿ ಅಧ್ಯಕ್ಷರು, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಮತ್ತು ಜನಸೇವಾ ಟ್ರಸ್ಟ್ (ರಿ.) ಸ್ಕಂದಗಿರಿ, ಅಳಿಕೆ, ಶ್ರೀಮತಿ ಶ್ರೀಕಲಾ ಬಾಲಕೃಷ್ಣ ಕಾರಂತ ಕಂದಾಯ ಅಧಿಕಾರಿ, ಪುತ್ತೂರು ತಾಲೂಕು ಕಛೇರಿ, ಶ್ರೀಮತಿ ಶಾಲಿನಿ ಸದಾನಂದ ಶೆಟ್ಟಿ ಅಧ್ಯಕ್ಷರು, ಸುಜ್ಞಾನ ಮಹಿಳಾ ಮಂಡಳಿ, ಎರುಂಬು ಕು। ಅಶ್ವಿನಿ ಪೆರುವಾಯಿ ನಿರೂಪಕಿ ವಿಟಿವಿ, ದೃಶ್ಯ ಮಾಧ್ಯಮ, ಶ್ರೀಮತಿ ಜಯಲಕ್ಷ್ಮೀ ಮಹೇಶ್ ಅಳಿಕೆ, ಶ್ರೀಮತಿ ಸವಿತ ಎ. ಸಹಶಿಕ್ಷಕಿ, ಸ.ಉ.ಹಿ.ಪ್ರಾ ಶಾಲೆ ದೇಲಂತಬೆಟ್ಟು, ಶ್ರೀಮತಿ ಪ್ರಮೀಳಾ ವಿಶ್ವನಾಥ ಪೂಜಾರಿ ಸಣ್ಣಗುತ್ತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಚಾಲಕರು ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನದ ನಾಟ್ಯಗುರು ಶೇಖರ ಶೆಟ್ಟಿ ಬಾಯಾರು ಇವರಿಗರ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು. ಹಾಗೂ ಸಂಸ್ಕಾರ ಸೌರಭ ತರಗತಿ ನಡೆಸುತ್ತಿರುವ ಭಗಿನಿಯರಾದ ರಜನಿ ವಿ ಶೆಟ್ಟಿ, ಕುಮಾರಿ ಸಿಂಚನ, ಕುಮಾರಿ ಪಯಸ್ವಿನಿ ಹಾಗೂ ಸಹಕಾರ ನೀಡುತ್ತಿರುವ ಲೀಲಾವತಿ ರಮಾಗೌಡ, ಸಾಯಿ ಶರಣ್ಯ, ಇವರನ್ನು ಗೌರವಿಸಲಾಯಿತು.

ಸಂಸ್ಕಾರ ಸೌರಭ ಅಳಿಕೆ ಇದರ ಮಕ್ಕಳಿಂದ ನೃತಯ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಮಕ್ಕಳ ಯಕ್ಷಗಾನ ರಂಗಪ್ರವೇಶ, ಮೇದಿನಿ ನಿರ್ಮಾಣ-ಶ್ರೀದೇವಿ ಮಹಿಷಮರ್ದಿನಿ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಸಂಘ ಸಂಸ್ಥೆಗಳು ಸಹಕರಿಸಿದವು.

- Advertisement -

Related news

error: Content is protected !!