- Advertisement -
- Advertisement -
ವಿಟ್ಲ : ನೀರು ಕುಡಿಯಲು ಬಂದಿದ್ದ ಕಾಡುಕೋಣವೊಂದು ವಾಟರ್ ಟ್ಯಾಂಕ್ ನಲ್ಲಿ ಸಿಲುಕಿಕೊಂಡ ಘಟನೆ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಳೆಂಜಿಮಲೆ ರಕ್ಷಿತಾರಣ್ಯದಿಂದ ಮಧ್ಯ ರಾತ್ರಿ ನೀರು ಹುಡುಕಿಕೊಂಡು ಬಂದ ಕೋಣ ಕನ್ಯಾನದ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ಜಾರಿ 5 ಅಡಿ ಆಳದ ಟ್ಯಾಂಕ್ ಗೆ ಬಿದ್ದಿದೆ.
ಎತ್ತರ ಇದ್ದುದರಿಂದ ಅಲ್ಲೇ ಬಾಕಿಯಾಗಿದ್ದು, ಬೆಳಿಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸದ್ಯ ಟ್ಯಾಂಕ್ ನಿಂದ ನೀರು ಖಾಲಿ ಮಾಡಲಾಗುತ್ತಿದ್ದು, ನಂತರ ಅದನ್ನು ರಕ್ಷಿಸಲಾಗುವುದು. ಬಿದ್ದ ಪರಿಣಾಮ ಕೋಣಕ್ಕೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
- Advertisement -